ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಪು : ಕಡಲ್ಕೊರೆತ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ : ಯೋಗೀಶ್ ಶೆಟ್ಟಿ

ಕಾಪು :ಮಳೆಗಾಲಕ್ಕೂ ಮುನ್ನ ಕಡಲ್ಕೊರೆತದ ಸಮಸ್ಯೆಗೆ ಶಾಶ್ವತ ಪರಿಹಾರ ಜಿಲ್ಲಾಡಳಿತ ಕಂಡುಕೊಳ್ಳಬೇಕಿತ್ತು ಎಂದು ಮೂಳೂರು ಮತ್ತು ಕಾಪು ಭಾಗದ ಕಡಲ್ಕೊರೆತ ಪ್ರದೇಶಗಳಿಗೆ ಭೇಟಿ ನೀಡಿದ ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಬಾಲಾಜಿ ಆಗ್ರಹಿಸಿದ್ದಾರೆ.

ಮಳೆಗಾಲ ಪ್ರಾರಂಭವಾದ ಮೇಲೆ ಕಡಲು ಕೊರೆತದ ಬಗ್ಗೆ ಚಿಂತಿಸುವುದಲ್ಲ. ಮುಂಚಿತವಾಗಿ ಸಮಸ್ಯೆ ಇರುವ ಪ್ರದೇಶಗಳ ಬಗ್ಗೆ ಜಿಲ್ಲಾಡಳಿತ ಯೋಚಿಸುತ್ತಿದ್ದರೆ ಕಾಪು ತಾಲೂಕಿನಲ್ಲಿ ಕಡಲು ಕೊರೆತದಿಂದ ಸಮಸ್ಯೆ ಆಗುತ್ತಿರಲಿಲ್ಲ.

ಮಳೆಗಾಲ ಈಗಷ್ಟೇ ಆರಂಭವಾಗಿದೆ. ಇನ್ನೂ ಹೆಚ್ಚಿನ ಮಳೆ ಬೀಳುವ ಸಂದರ್ಭ ಸಮುದ್ರ ಕೊರೆತ ಉಂಟಾಗಿ ಕೆಲವು ಜಾಗಗಳಿಗೆ, ಮನೆಗಳಿಗೆ ಹಾನಿಯಾಗುವ ಸಂಭವವಿದೆ ಅದನ್ನು ತಡೆಗಟ್ಟಬೇಕಾಗಿದೆ.

ಸರಕಾರ ಸರಿಯಾಗಿ ಟೆಂಡರ್ ಮಾಡಿ ಅನುದಾನ ಬಿಡುಗಡೆ ಮಾಡಬೇಕಿದೆ. ಸರಕಾರ ಹಣ ಬಿಡುಗಡೆ ಮಾಡದೆ ಗುತ್ತಿಗೆದಾರರಿಗೂ ತೊಂದರೆಯಾಗಿದೆ. ಈ ಸಮಸ್ಯೆಯನ್ನು ಕೂಡಲೇ ಜಿಲ್ಲಾಡಳಿತ ಬಗೆಹರಿಸಬೇಕೆಂದು ಮನವಿ ಮಾಡುತ್ತೇನೆ ಎಂದರು.

ಈ ಸಂದರ್ಭದಲ್ಲಿ ಜೆಡಿಎಸ್ ಪ್ರಮುಖರು, ಸ್ಥಳೀಯರು ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

12/07/2022 04:56 pm

Cinque Terre

4.84 K

Cinque Terre

1

ಸಂಬಂಧಿತ ಸುದ್ದಿ