ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಮಳೆಯಿಂದ ಹಾನಿಗೀಡಾದ ಪ್ರದೇಶಗಳಿಗೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಭೇಟಿ, ಪರಿಶೀಲನೆ

ನಂಚಾರು : ಭಾರಿ ಗಾಳಿ ಮಳೆಯಿಂದ ಹಾನಿಗೊಳಗಾದ ಹೆಸ್ಕುಂದ, ನಂಚಾರು ಗ್ರಾಮಗಳಿಗೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಉಡುಪಿ ವಿಧಾನಸಭಾ ಕ್ಷೇತ್ರದ ಗಡಿ ಭಾಗವಾದ ಹೆಸ್ಕುಂದ, ನಂಚಾರು ಗ್ರಾಮದಲ್ಲಿ ಬಂದ ಭಾರಿ ಗಾಳಿ ಮಳೆ ಮತ್ತು ಸುಂಟರಗಾಳಿಯಿಂದಾಗಿ ಮನೆಗಳು, ದನದ ಹಟ್ಟಿ, ಗಿಡ ಮರಗಳು, ಕೃಷಿ ಭೂಮಿ ಮತ್ತು ತೋಟಗಳಿಗೆ ಅಪಾರ ಹಾನಿಯಾಗಿತ್ತು.

ಇಲ್ಲಿಗೆ ಭೇಟಿ ನೀಡಿದ ಪ್ರಮೋದ್ ಮಧ್ವರಾಜ್ ಸ್ಥಳೀಯ ನಾಯಕರಾದ ತಾರಾನಾಥ ಶೆಟ್ಟಿ, ಸತೀಶ್ ಪೂಜಾರಿ, ಭಾಸ್ಕರ ನಾಯ್ಕರವರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯರಿಗೆ ಧೈರ್ಯ ತುಂಬಿದರು.

ಸರಕಾರದಿಂದ ಗರಿಷ್ಟ ಪರಿಹಾರಕ್ಕೆ ಮತ್ತು ಸೂಕ್ತ ವಸತಿ ವ್ಯವಸ್ಥೆಗೆ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ, ಪೋಲಿಸ್ ವರಿಷ್ಠಾಧಿಕಾರಿ ಮತ್ತು ತಹಶೀಲ್ದಾರ್ ರವರಿಗೆ ಕರೆ ಮಾಡಿ ಸೂಚಿಸಿದರು.

Edited By : Manjunath H D
Kshetra Samachara

Kshetra Samachara

08/10/2021 05:42 pm

Cinque Terre

6.73 K

Cinque Terre

0

ಸಂಬಂಧಿತ ಸುದ್ದಿ