ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: 'ಸರ್ಕಾರಕ್ಕೆ ಮಳೆಗಾಲದ ಮುಂಜಾಗ್ರತಾ ಪೂರ್ವಭಾವಿ ಸಭೆಯ ಬಗ್ಗೆ ವಿಪಕ್ಷ ಒತ್ತಾಯಿಸಬೇಕಿಲ್ಲ'

ಸರ್ಕಾರಕ್ಕೆ ಮಳೆಗಾಲದ ಸಂದರ್ಭದಲ್ಲಿ ಮುಂಜಾಗ್ರತಾ ಕ್ರಮದ ಬಗ್ಗೆ ಪೂರ್ವಭಾವಿ ಸಭೆ ನಡೆಸಲು ವಿಪಕ್ಷ ಒತ್ತಾಯಿಸಬೇಕಿಲ್ಲ. ಅದು ಸರ್ಕಾರದ ಜವಾಬ್ದಾರಿ ಎಂದು ಮಾಜಿ ಸಚಿವ ರಮಾನಾಥ ರೈಯವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಇರುವಾಗ ಮಳೆಗಾಲಕ್ಕೆ ಮುಂಚಿತವಾಗಿ ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಪೂರ್ವಭಾವಿ ಸಭೆ ನಡೆಸಿ ಕ್ರಮ ಕೈಗೊಳ್ಳಲಾಗುತ್ತಿತ್ತು. ಆದರೆ ಆಡಳಿತದಲ್ಲಿ ಇರುವ ಬಿಜೆಪಿ ಸರಕಾರದಿಂದ ಈ ಕಾರ್ಯ ಆಗುತ್ತಿಲ್ಲ ಎಂದು ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು ಮಳೆ ಹಾನಿ ಪರಿಹಾರ ಕೊಡುವಲ್ಲಿ ಕಂಜೂಸುತನ ಮಾಡಬೇಡಿ ಎಂದು ಹೇಳಿದ್ದಾರೆ. ಆದರೆ ಸರ್ಕಾರ ಪರಿಹಾರ ಕೊಡುವ ಸಂದರ್ಭ ಕಂಜೂಸುತನ ಮಾಡೋದು ಬೇಡ ಎಂದು ಸರಕಾರಕ್ಕೆ ಒತ್ತಾಯಿಸುತ್ತೇನೆ. ಸರ್ಕಾರ ಶೀಘ್ರ ಪರಿಹಾರ ಕೊಡುವ ಕಾರ್ಯ ಮಾಡಲಿ ಎಂದು ರಮಾನಾಥ ರೈ ಹೇಳಿದರು.

Edited By :
PublicNext

PublicNext

12/07/2022 07:41 pm

Cinque Terre

42.51 K

Cinque Terre

3

ಸಂಬಂಧಿತ ಸುದ್ದಿ