ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಟ್ವಾಳ: ಪಂಜಿಕಲ್ಲು ದುರಂತ: ಮೃತರ ಕುಟುಂಬಗಳಿಗೆ 5 ಲಕ್ಷ ರೂ ಪರಿಹಾರ ವಿತರಿಸಿದ ಸಿಎಂ

ಬಂಟ್ವಾಳ: ಗುಡ್ಡ ಜರಿದು ಮಣ್ಣಿನಡಿ ಸಿಲುಕಿ ಸಾವನ್ನಪ್ಪಿದ ಕೇರಳದ ಮೂವರು ಕಾರ್ಮಿಕರಿಗೆ ತಲಾ 5 ಲಕ್ಷ ರೂ ನಂತೆ ಪರಿಹಾರದ ಚೆಕ್ ಅನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಂಟ್ವಾಳದ ಪ್ರವಾಸಿ ಬಂಗ್ಲೆಯಲ್ಲಿ ಮಂಗಳವಾರ ಸಂಜೆ ವಿತರಿಸಿದರು.

ಜಡಿಮಳೆಗೆ ಗುಡ್ಡ ಜರಿದು ಮನೆಯ ಮೇಲೆ ಬಿದ್ದ ಪರಿಣಾಮ ಅದರಲ್ಲಿ ವಾಸವಿದ್ದ ಕೇರಳ ಮೂಲದ ನಾಲ್ವರು ರಬ್ಬರ್ ಟ್ಯಾಪಿಂಗ್ ಕಾರ್ಮಿಕರು ಮಣ್ಣಿನಡಿಗೆ ಸಿಲುಕಿದ ಘಟನೆ ಜುಲೈ 6ರಂದು ಬುಧವಾರ ರಾತ್ರಿ ನಡೆದಿದ್ದು, ಸತತ ಕಾರ್ಯಾಚರಣೆ ಬಳಿಕ ಎಲ್ಲರನ್ನೂ ಮಣ್ಣಿನಡಿಯಿಂದ ಹೊರತೆಗೆದರೂ ಮೂವರು ಮೃತಪಟ್ಟಿದ್ದರು. ಬಿಜು ಪಾಲಕ್ಕಡ್ , ಸಂತೋಷ್ ಅಲಪುರ, ಬಾಬು ಕೊಟ್ಟಾಯಂ ಅವರ ಕುಟುಂಬ ಸದಸ್ಯರು ಪರಿಹಾರ ಚೆಕ್ ಪಡೆದುಕೊಂಡರು.

ಬಳಿಕ ಸಿಎಂ ಅವರು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ಅವರೊಂದಿಗೆ ರಾಜ್ಯ ರಾಜಕೀಯ ವಿದ್ಯಮಾನಗಳ ಕುರಿತು ರಹಸ್ಯ ಮಾತುಕತೆಯನ್ನು ಕೆಲಕಾಲ ನಡೆಸಿದರು. ಈ ಕುರಿತು ಮಾಧ್ಯಮದೊಂದಿಗೆ ಮಾಹಿತಿ ನೀಡಿಲು ನಿರಾಕರಿಸಿದರು.

Edited By : Nagaraj Tulugeri
PublicNext

PublicNext

13/07/2022 09:00 am

Cinque Terre

18.91 K

Cinque Terre

0

ಸಂಬಂಧಿತ ಸುದ್ದಿ