ಉಡುಪಿ: ಉಡುಪಿ ಜಿಲ್ಲೆ ರಚನೆಯಾಗಿ ಇಂದಿಗೆ ಭರ್ತಿ 25 ವರ್ಷ. ಈ ಹಿನ್ನೆಲೆಯಲ್ಲಿ ಅದ್ಧೂರಿ ಜಿಲ್ಲಾ ರಜತ ಮಹೋತ್ಸವ ಏರ್ಪಡಿಸಲಾಗಿದೆ. ಇದರ ಪ್ರಯುಕ್ತ ಯುವ ಜನತೆಯನ್ನು ಸೈನ್ಯಕ್ಕೆ ಆಕರ್ಷಿಸುವ ನಿಟ್ಟಿನಲ್ಲಿ ಅಗ್ನಿಪಥ್ ದೌಡ್ ಆಯೋಜಿಸಲಾಗಿದೆ.
ಜಿಲ್ಲಾಡಳಿತ ಮತ್ತು ಟೀಮ್ ನೇಷನ್ ಫಸ್ಟ್ ಸಹಭಾಗಿತ್ವದಲ್ಲಿ ನಿನ್ನೆ ಕಾರ್ಕಳದಿಂದ ಆರಂಭವಾದ 75 ಕೀ.ಮೀ. ಮ್ಯಾರಥಾನ್ ಓಟ 'ಅಗ್ನಿಪಥ್ ದೌಡ್' ಇಂದು ಕಿನ್ನಿಮೂಲ್ಕಿ ಸ್ವಾಗತ ಗೋಪುರ ಬಳಿ ತಲುಪಿತು. ಈ ಸಂದರ್ಭ ಉಡುಪಿ ಜಿಲ್ಲಾಧಿಕಾರಿ ಕೂರ್ಮಾ ರಾವ್, ಎಸ್‌ಪಿ ಹಾಕೆ ಅಕ್ಷಯ್ ಮಚ್ಚಿಂದ್ರ, ಶಾಸಕ ಕೆ. ರಘುಪತಿ ಭಟ್ ಸ್ವಾಗತ ಕೋರಿದರು.
ಬಳಿಕ ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಎಚ್, ಪೋಲಿಸ್ ವರಿಷ್ಠಾಧಿಕಾರಿ ಹಾಕೆ ಅಕ್ಷಯ್ ಮಚ್ಚಿಂದ್ರ ಅವರು ಅಗ್ನಿಪಥ್ ದೌಡ್ ಓಟದಲ್ಲಿ ಪಾಲ್ಗೊಂಡರು.
Kshetra Samachara
25/08/2022 09:46 am