ಉಡುಪಿ: ತೋಡು ದಾಟುವ ಸಮಯದಲ್ಲಿ ಕಾಲು ಜಾರಿ ಬಿದ್ದು ಮೃತಪಟ್ಟ ಮಗುವಿಗೆ ಗರಿಷ್ಟ 5ಲಕ್ಷ ಪರಿಹಾರ ಕೊಡಲು ಅವಕಾಶವಿದೆ. ಸಿಎಂ ಜೊತೆ ಚರ್ಚಸಿ ಪರಿಹಾರ ಮೊತ್ತ ಘೋಷಿಸುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಅಂಗಾರ ಹೇಳಿದ್ದಾರೆ. ಮೃತ ಬಾಲಕಿ ಮನೆಗೆ ಇಂದು ಭೇಟಿ ನೀಡಿದ್ದ ಸಚಿವರು ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
ಬೈಂದೂರು ವಿಧಾನಸಭಾ ಕ್ಷೇತ್ರದ ಕಾಲ್ತೋಡು ಗ್ರಾಮಕ್ಕೆ ಭೇಟಿ ಕೊಟ್ಟಿದ್ದೇನೆ. ಏಳು ವರ್ಷದ ಬಾಲಕಿ ಸನ್ನಿಧಿ ಮರದ ಕಾಲು ಸಂಕ ದಾಟುವಾಗ ಜಾರಿ ಬಿದ್ದಿದ್ದಾರೆ.
ಪ್ರಾಕೃತಿಕ ವಿಕೋಪದಿಂದ ಈ ಘಟನೆ ಸಂಭವಿಸಿದೆ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳಾಗದಂತೆ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳುವಂತೆ ಸೂಚಿಸಿದ್ದೇನೆ.
ಗ್ರಾ.ಪಂ ಪಿ.ಡಿ.ಒ ಹಾಗೂ ತಾ.ಪಂ ಇ.ಒ ಗಳಿಗೆ ವಿಶೇಷ ಮುತುವರ್ಜಿ ವಹಿಸಿವಂತೆ ಸೂಚಿಸಿಲಾಗಿದೆ. ಸಣ್ಣ ಪುಟ್ಟ ತೋಡುಗಳಿಗೆ ಮುಂದಿನ ಐದಾರು ತಿಂಗಳಲ್ಲಿ ಸೇತುವೆ ನಿರ್ಮಾಣಕ್ಕೆ ಯೋಜನೆ ರೂಪಿಸುವಂತೆ ತಿಳಿಸಲಾಗಿದೆ ಎಂದು ಹೇಳಿದ್ದಾರೆ.
PublicNext
10/08/2022 08:39 pm