ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗಿರಿಧರ್ ರೈ ಮನೆಗೆ ಮಾಜಿ ಸಚಿವ ಸುರೇಶ್ ಕುಮಾರ್ ಮತ್ತು ಸಚಿವ ಎಸ್. ಅಂಗಾರ ಭೇಟಿ

ಸುಳ್ಯ : ಮಾಜಿ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ವಿದ್ಯುತ್ ಸಮಸ್ಯೆ ಕುರಿತಾಗಿ ದೂರವಾಣಿ ಕರೆ ಮಾಡಿ ಬೈದಿದ್ದಕ್ಕೆ ಬಂಧನಕ್ಕೊಳಗಾಗಿದ್ದ, ಸುಳ್ಯ ತಾಲೂಕಿನ ಬೆಳ್ಳಾರೆ ಗ್ರಾಮದ ಗಿರಿಧರ ರೈ ಅವರ ನಿವಾಸಕ್ಕೆ ಶಾಸಕ ಮತ್ತು ಮಾಜಿ ಸಚಿವ ಎಸ್. ಸುರೇಶ್ ಕುಮಾರ್ ಭೇಟಿ ನೀಡಿದ್ದಾರೆ. ಸಚಿವ ಎಸ್. ಅಂಗಾರ ಅವರೊಂದಿಗೆ ಭೇಟಿ ನೀಡಿದ್ದ ಸುರೇಶ್ ಕುಮಾರ್, ಗಿರಿಧರ ರೈ ಅವರ ತಾಯಿಯ ಆರೋಗ್ಯ ವಿಚಾರಿಸಿ ಕುಟುಂಬ ಸದಸ್ಯರಿಗೆ ಧೈರ್ಯ ಹೇಳಿದ್ದಾರೆ.

2016 ರಲ್ಲಿ ಅಂದಿನ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ಸಂಜೆ 7 ಗಂಟೆ ವೇಳೆಗೆ ವಿದ್ಯುತ್ ಸಮಸ್ಯೆ ಕುರಿತಾಗಿ ದೂರವಾಣಿ ಕರೆ ಮಾಡಿ ಬೈದಿದ್ದರು.

2016 ರಲ್ಲಿ ನಡೆದ ಪ್ರಕರಣ ಅಂದಿನಿಂದ ಇಂದಿನವರೆಗೂ ಚರ್ಚೆಯಾಗುತ್ತಲೇ ಇದೆ.ಸುಳ್ಯದಲ್ಲಿ ಇರುವ ವಿದ್ಯುತ್ ಸಮಸ್ಯೆ ಇಂದಿಗೂ ಸರಿಯಾಗಿ ಬಗೆಹರಿದಿಲ್ಲ. ಬೆಳ್ಳಾರೆಯ ಸಬ್ ಸ್ಟೇಶನ್ ಕೂಡಾ ಅದಾದ ಬಳಿಕವೇ ಉದ್ಘಾಟನೆಯೂ ಆಗಿತ್ತು. ಇಂದಿಗೂ ಸುಳ್ಯದ ವಿದ್ಯುತ್ ಸಮಸ್ಯೆ ಬಗೆಹರಿಯಲು ಪ್ರಯತ್ನಗಳು ನಡೆಯುತ್ತಲೇ ಇದೆ. ಸಾಯಿಗಿರಿಧರ ರೈ ಅವರು ಸಾಮಾಜಿಕ ಸಮಸ್ಯೆ ಬಗ್ಗೆ ಮಾತನಾಡಲು ಹೋಗಿ ಕೊನೆಗೆ ಕೋರ್ಟ್, ಕೇಸ್ ಎಂದು ಅಲೆಯುವಂತಾಗಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಡಿ. ಕೆ ಶಿವಕುಮಾರ್ ಅವರೂ ಸುಳ್ಯ ನ್ಯಾಯಾಲಯಕ್ಕೆ ಆಗಮಿಸಿ ಸಾಕ್ಷ್ಯ ನುಡಿದಿದ್ದರು.

2016ರಲ್ಲಿ ಸುಳ್ಯದ ವಿದ್ಯುತ್ ಸಮಸ್ಯೆ ತೀವ್ರಗೊಂಡು ಆಕ್ರೋಶಗೊಂಡ ಕೃಷಿಕ ಸಾಯಿಗಿರಿಧರ ರೈ ಅವರು ಅಂದಿನ ಇಂಧನ ಸಚಿವ ಡಿ ಕೆ ಶಿವಕುಮಾರ್ ಅವರಿಗೆ ಕರೆ ಮಾಡಿದ್ದರು. ಕರೆ ಮಾಡುತ್ತಲೇ ಅವರು ಆಕ್ರೋಶವನ್ನೂ ವ್ಯಕ್ತಪಡಿಸಿದ್ದರು. ಈ ಸಂಬಂಧ ಸಚಿವರು ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ರಾತ್ರೋ ರಾತ್ರಿ ಪೊಲೀಸರು ಸಾಯಿಗಿರಿಧರ ರೈ ಮನೆಗೆ ನುಗ್ಗಿಅವರನ್ನು ಬಂಧಿಸಿದ್ದರು. ಅದಾದ ಬಳಿಕ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಸಾಯಿಗಿರಿಧರ ರೈ ವಿರುದ್ಧವಾಗಿ ನ್ಯಾಯಾಲಯದ ತೀರ್ಪು ಪ್ರಕಟವಾಗಿತ್ತು ಅದಾಗಿ ಸಾಯಿಗಿರಿಧರ ರೈ ಅವರು ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿ ಜಾಮೀನು ಪಡೆದಿದ್ದರು. ಇದೀಗ ಅವರ ಮನೆಗೆ ಮಾಜಿ ಸಚಿವ ಸುರೇಶ್ ಕುಮಾರ್ ಹಾಗೂ ಸಚಿವ ಎಸ್ ಅಂಗಾರ ಭೇಟಿ ಮಾತುಕತೆ ನಡೆಸಿ ಸಾಂತ್ವನ ಹೇಳಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

29/05/2022 01:09 pm

Cinque Terre

5.55 K

Cinque Terre

1

ಸಂಬಂಧಿತ ಸುದ್ದಿ