ಉಡುಪಿ: ಉಡುಪಿ ಶಾಸಕ ರಘುಪತಿ ಭಟ್ ಗೆ ಗನ್ ಮ್ಯಾನ್ ಭದ್ರತೆ ಒದಗಿಸಲಾಗಿದೆ.
ವಿದೇಶದಿಂದ ಮತ್ತು ಹೈದರಾಬಾದ್ ನಿಂದ ಶಾಸಕರಿಗೆ ಬೆದರಿಕೆ ಕರೆಗಳು ಬರುತ್ತಿದ್ದವು.ಮುಖ್ಯವಾಗಿ ಹಿಜಾಬ್ ವಿಚಾರದಲ್ಲಿ ರಘುಪತಿ ಭಟ್‌ರನ್ನು ತರಾಟೆಗೆ ತೆಗೆದುಕೊಂಡಿರುವ ಕಿಡಿಗೇಡಿಗಳು ,ಇಂಟರ್ನೆಟ್ ,ಮೆಸೆಂಜರ್ ಕಾಲ್ ಮೂಲಕ ಬೆದರಿಕೆ ಒಡ್ಡಿದ್ದರು.
ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಗನ್ ಮ್ಯಾನ್ ಪಡೆದುಕೊಳ್ಳುವಂತೆ ಸಲಹೆ ನೀಡಿತ್ತು.ಆದರೆ ತಮಗೆ ಯಾವುದೇ ಭದ್ರತೆ ಅಗತ್ಯವಿಲ್ಲ ಎಂದು ಶಾಸಕರು ಹೇಳಿದ್ದರೂ ಇಲಾಖೆ ಗನ್ ಮ್ಯಾನ್ ಮೂಲಕ ಭದ್ರತೆ ಒದಗಿಸಿದೆ.
Kshetra Samachara
12/02/2022 04:45 pm