ಉಡುಪಿ: ಜಿಲ್ಲೆಯಲ್ಲಿ ನಕ್ಸಲ್ ಕರಿ ನೆರಳು ಕಂಡಿದ್ದ ಅಮಾಸೆಬೈಲು ಮತ್ತೆ ಸುದ್ದಿಗೆ ಬರುತ್ತಿದೆ. ಸದಾ ನಕ್ಸಲ್ ವಿಷಯಕ್ಕೆ ಸುದ್ದಿಯಾಗುತ್ತಿದ್ದ ಅಮಾಸೆಬೈಲ ಈ ಬಾರಿ ಬೇರೆಯೇ ವಿಚಾರಕ್ಕೆ ಹೆಸರಿಗೆ ಬರುತ್ತಿದೆ. ಕಾಡು ಪ್ರಾಣಿಗಳೆ ಇರುವ ದಟ್ಟ ಕಾಡಿನ ಪ್ರದೇಶವಾದ ಅಮವಾಸೆಬೈಲಿನಲ್ಲಿ ಸದ್ಯ ಆತ್ಮ ರಕ್ಷಣೆಗೆ ಏರ್ ಗನ್ ಇರಿಸಿಕೊಳ್ಳುವುದು ಅಪರಾಧ ಎನ್ನುವುವಂತಾಗಿದೆ. ಹಾಗಾದ್ರೆ ಏನು ವಿಷಯ, ಮಲಗಿದ್ದ ಅಮವಾಸೆಬೈಲು ಮತ್ತೆ ಯಾಕೆ ಎದ್ದಿದೆ ಎನ್ನುವುದನ್ನು ತಿಳಿಯಲು ಈ ಸ್ಟೋರಿ ನೋಡಿ...
ಉಡುಪಿ ಜಿಲ್ಲೆಯಲ್ಲಿ ಕಳೆದ ಕೆಲವು ವರ್ಷಗಳ ಹಿಂದೆ ಅಮಾಸೆಬೈಲು, ಹಳ್ಳಿಹೊಳೆ, ಹೆಬ್ರಿಯ ಕೆಲವು ಭಾಗಗಳು ನಕ್ಸಲ್ ಸುದ್ದಿಯ ಮೂಲಕ ರಾಜ್ಯದ ಮುಂದೆ ತನ್ನ ಇರುವಿಕೆಯನ್ನು ತಿಳಿಸಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಈ ಭಾಗಗಳು ಆಧುನಿಕತೆಯತ್ತ ದಾಪುಗಾಲು ಹಾಕುತ್ತಾ ನಕ್ಸಲ್ ಇತಿಹಾಸ ಮರೆಯುವಂತೆ ಮಾಡಿದೆ. ಆದರೆ ಕೆಲವು ಅಧಿಕಾರಿಗಳು ಬಲವಂತವಾಗಿ ಹಳ್ಳಿಯ ಮುಗ್ಧ ಜನರ ಮೇಲೆ ಕಾನೂನು ಪ್ರಯೋಗ ಮಾಡುವ ಮೂಲಕ, ವ್ಯವಸ್ಥೆ ವಿರುದ್ಧ ಜನ ಪ್ರತಿಭಟಿಸುವ ಹಂತಕ್ಕೆ ಕೊಂಡು ಹೋಗುತ್ತಿದ್ದಾರೆ. ಈ ಏರ್ ಗನ್ ವಿಚಾರ ಅಷ್ಟೆ, ಪರಿಶಿಷ್ಟ ಜಾತಿಯ ಕೂಲಿ ಕೆಲಸ ಮಾಡುವ ಯುವಕ ನೋರ್ವ ಏರ್ ಗನ್ ಕೊಂಡು ತಂದು ತಿಂಗಳಿನ ಒಳಗೆ ಯಾವುದೇ ಅಪರಾಧ ಮಾಡದೆ ಬಂಧನಕ್ಕೆ ಒಳಗಾಗಿದ್ದಾನೆ. ಅಮಾವಾಸೆಬೈಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಗೋಳಿ ಕಾಡು ಎನ್ನುವ ಪ್ರದೇಶ ನಟರಾಜ್ ನಾಯ್ಕ್ ಎನ್ನುವಂತಾನೆ ಸದ್ಯ ಅಮವಾಸೆಬೈಲು ವಿವಾದ ಕೇಂದ್ರ ಬಿಂದು.
ಈ ಹಿಂದೆ ಅರಣ್ಯ ಇಲಾಖೆಯವರ ಜೊತೆ ಕಾಡಿನಲ್ಲಿ ಕೆಲಸ ಮಾಡಿಕೊಂಡಿದ್ದ ನಟರಾಜ್ ನಾಯ್ಕ್ ಇಲಾಖೆಯ ನೆಚ್ಚಿನ ಸೇವಕನಾಗಿದ್ದ. ಇತ್ತೀಚೆಗೆ ಹೊಸ ಅರಣ್ಯಾಧಿಕಾರಿಗಳು ಬಂದ ಬಳಕ ಇಲಾಖೆಯ ಕೆಲಸದಿಂದ ನಟರಾಜ್ ದೂರ ಉಳಿದಿದ್ದ. ಇದೇ ಜನವರಿ ೨೫ ರಂದು ಹೆಬ್ರಿಯಿಂದ, ಕೃಷಿ ಕಾರ್ಯಕ್ಕೆ ಉಪಟಳ ಮಾಡುವ ಪ್ರಾಣಿಗಳನ್ನು ಓಡಿಸುವ ಸಲುವಾಗಿ ಏರ್ ಗನ್ ಕೊಂಡು ತಂದಿದ್ದ. ನಟರಾಜ್ ಏರ್ ಗನ್ ತಂದ ವಿಷಯದ ಮಾಹಿತಿ ಪಡೆದ ಅರಣ್ಯ ಇಲಾಖೆಯವರು ಆತನ ಬೆನ್ನು ಹತ್ತಿದ್ದರು. ಅಲ್ಲದೇ ಏರ್ ಗನ್ ಸರ್ವಿಸ್ ಗೆ ತೆರಳುತ್ತಿದ್ದ ವೇಳೆ, ಅರಣ್ಯ ಇಲಾಖೆಯವರಿಗೆ ಸೇರದ ಪೇಟೆಯ ಜಾಗದಲ್ಲಿ ನಟರಾಜ್ ನನ್ನು ಬಂಧಿಸಿ ಪರವಾನಿಗೆ ಇಲ್ಲದ ಅಕ್ರಮ ಕೋವಿ ಇರಿಸಿಕೊಂಡಿರುವ ಕುರಿತು ದೂರು ನೀಡಿ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ. ಅಮಾಯಕ ಯುವಕ ಬಂಧನ ಸುದ್ದಿ ತಿಳಿದ ಅಮಾಸೆಬೈಲಿನ ಸ್ಥಳೀಯರು ಸದ್ಯ ಅಕ್ರೋಶ ವ್ಯಕ್ತಪಡಿಸಿ ಅರಣ್ಯಾಧಿಕಾರಿ ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ್ದಾರೆ.
ಒಟ್ಟಾರೆಯಾಗಿ ಇಂತಹ ಪ್ರಕರಣಗಳು ಅಮಾಸೆಬೈಲಿನಂತಹ ಊರಿನಲ್ಲಿ ಮತ್ತೆ ನಕ್ಸಲ್ ಪಡೆ ಚಿಗುರಲು ಎಡೆ ಮಾಡಿಕೊಡುವಂತಿದೆ. ಅರಣ್ಯ ಸಂಪತ್ತನ್ನು ಹಗಲು ರಾತ್ರಿ ಲೂಟಿ ಮಾಡುವ ಲೂಟಿಕೋರರನ್ನು ಬಂಧಿಸದ ಇಲಾಖೆ, ಇಂತಹ ಅಮಾಯಕನನ್ನು ಬಂಧಿಸಿರುವ ಕುರಿತು ಜಿಲ್ಲೆಯಾದ್ಯಂತ ಆಕ್ರೋಶ ವ್ಯಕ್ತವಾಗಿದೆ.
Kshetra Samachara
15/02/2021 07:31 pm