ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಪು: ತಾಲೂಕಿನ 16 ಗ್ರಾಪಂ ಚುನಾವಣೆಗೆ ಸಿದ್ಧತೆ ಪೂರ್ಣ ; ಜಿಲ್ಲಾಧಿಕಾರಿ ಜಿ.ಜಗದೀಶ್

ಕಾಪು: ಕಾಪು ತಾಲೂಕಿನ 16 ಗ್ರಾಮ ಪಂಚಾಯಿತಿಗಳಿಗೆ ಎರಡನೇ ಹಂತದ ಚುನಾವಣೆಗೆ ಚುನಾವಣಾ ಕರ್ತವ್ಯ ಸಿಬ್ಬಂದಿಯನ್ನು ಮಾಸ್ಟರಿಂಗ್ ಕೇಂದ್ರವಾದ ದಂಡತೀರ್ಥ ಪದವಿ ಪೂರ್ವ ಕಾಲೇಜಿನಿಂದ ಶನಿವಾರ ಕಳುಹಿಸಿ ಕೊಡಲಾಯಿತು.

ಈ ಸಂದರ್ಭ ಮಾಸ್ಟರಿಂಗ್ ಕೇಂದ್ರಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಜಿ.ಜಗದೀಶ್ , ಎಲ್ಲ ಸಿದ್ಧತೆ ಪರಿಶೀಲಿಸಿದರು. ಬಳಿಕ ಮಾತನಾಡಿದ ಅವರು,ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ಮತದಾನ ಶಾಂತಿಯುತವಾಗಿ ಪೂರ್ಣಗೊಂಡಿದ್ದು,ಎರಡನೇ ಹಂತದ ಚುನಾವಣೆ ನಡೆಯುವ ಕಾಪು,ಕುಂದಾಪುರ,ಕಾರ್ಕಳ ತಾಲೂಕಿನ ಗ್ರಾಮ ಪಂಚಾಯಿತಿ ಗಳ ಚುನಾವಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮತಗಟ್ಟೆ ,ಸಿಬ್ಬಂದಿ ಹಾಗೂ ಮತದಾರರು ಕೋವಿಡ್ ಮುನ್ನೆಚ್ಚರಿಕೆ ಕ್ರಮ ಕಟ್ಟುನಿಟ್ಟಾಗಿ ಪಾಲಿಸಬೇಕು.ಮೊದಲ ಹಂತದಲ್ಲಿ ಚುನಾವಣೆ ನಡೆದ ಉದ್ಯಾವರ ಗ್ರಾಪಂ ವ್ಯಾಪ್ತಿಯ ಮತಪತ್ರವೊಂದರಲ್ಲಿ ಅಭ್ಯರ್ಥಿಯ ಗುರುತು ಚಿಹ್ನೆಯಲ್ಲಿ ಮುದ್ರಣ ದೋಷ ಕಂಡು ಬಂದಿದ್ದು,ಎರಡನೇ ಹಂತದಲ್ಲಿ ಮಾಸ್ಟರಿಂಗ್ ಕೇಂದ್ರಗಳಲ್ಲಿ ಮತಪತ್ರಗಳನ್ನು ಸರಿಯಾಗಿ ಪರಿಶೀಲಿಸಿ ಕಳುಹಿಸಿಕೊಡಲಾಗುತ್ತದೆ. ಮತದಾನ ದಿನದಂದು ಇಂತಹ ಸಮಸ್ಯೆಗಳು ಬಾರದಂತೆ ಮುದ್ರಣ ತಂಡವನ್ನು ಸಜ್ಜುಗೊಳಿಸಿಡಲಾಗಿದೆ ಎಂದರು.

ಜಿಲ್ಲೆಯ 7 ತಾಲೂಕು ಕೇಂದ್ರಗಳಲ್ಲಿ ಭದ್ರತಾ ಕೊಠಡಿಗಳನ್ನು ಸಿದ್ಧಪಡಿಸಲಾಗಿದ್ದು,ಆಯಾಯ ತಾಲೂಕುಗಳ ಗ್ರಾಪಂ ಮತ ಎಣಿಕೆ ಕಾರ್ಯ ಅಲ್ಲಿಯೇ ನಡೆಯಲಿದೆ ಎಂದರು.

ತಹಸೀಲ್ದಾರ್ ರಶ್ಮಿ, ನೋಡಲ್ ಅಧಿಕಾರಿ ಮುಹಮ್ಮದ್ ಇಸಾಖ್,ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ್ ನಾವಡ,ಆರ್.ಐ. ಸುಧೀರ್ ಶೆಟ್ಟಿ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Edited By : Nagesh Gaonkar
Kshetra Samachara

Kshetra Samachara

26/12/2020 05:02 pm

Cinque Terre

25.74 K

Cinque Terre

1

ಸಂಬಂಧಿತ ಸುದ್ದಿ