ಮಂಗಳೂರು: ಜಟ್ಕಾ-ಹಲಾಲ್, ಹಿಜಾಬ್, ವ್ಯಾಪಾರದಲ್ಲಿ ಧರ್ಮ ದಂಗಲ್ ಬಳಿಕ ಇದೀಗ ಬಾಡಿಗೆ ಮನೆ ವಿಚಾರದಲ್ಲೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಧರ್ಮ ದ್ವೇಷ ಸದ್ದಿಲ್ಲದೆ ಆವರಿಸಿದೆ. ರಿಯಲ್ ಎಸ್ಟೇಟ್ ಜಾಹೀರಾತುಗಳಲ್ಲಿ ಕೂಡ 'ಒಂದು ಧರ್ಮದವರಿಗೆ ಮಾತ್ರ' ಎಂದು ನಮೂದಿಸಿ ಬಾಡಿಗೆ ನೀಡುವ ಹೊಸ ವಿದ್ಯಮಾನ ನಡೆಯುತ್ತಿದೆ.
ಹಿಂದಿನಿಂದಲೂ ಬಹುತೇಕ ಹಿಂದೂಗಳು ಮುಸ್ಲಿಮ್ ಕುಟುಂಬಗಳಿಗೆ, ಮುಸ್ಲಿಮರು ಹಿಂದೂಗಳಿಗೆ ಮನೆ ಬಾಡಿಗೆ ನೀಡದೆ ಇರುವುದು ಅಘೋಷಿತವಾಗಿ ಚಾಲ್ತಿಯಲ್ಲಿತ್ತು. ಇತ್ತೀಚಿನ ಹಲವು ವಿದ್ಯಮಾನಗಳ ಬಳಿಕ 'ನಮ್ಮವರಿಗೆ ಮಾತ್ರ ಬಾಡಿಗೆ ಮನೆ' ಎಂದು ಬಹಿರಂಗವಾಗಿಯೇ ಹೇಳಿಕೊಳ್ಳುವ ಮಟ್ಟಕ್ಕೆ ದಕ್ಷಿಣ ಕನ್ನಡ ತಲುಪಿದೆ.
ಬಾಡಿಗೆ ಮನೆ ಮಾಲೀಕರು ಮಾತ್ರವಲ್ಲ, ಬೋಕರ್‌ಗಳೂ ಕೂಡ ಧರ್ಮಾಧಾರಿತವಾಗಿ ಜಾಹೀರಾತು ನೀಡುತ್ತಿರುವುದು ಕಂಡುಬಂದಿದೆ. ಸದ್ಯದ ಪರಿಸ್ಥಿತಿಯಲ್ಲಿ ಜಿಲ್ಲೆಯಲ್ಲಿ ಬ್ರೋಕರ್‌ಗಳದ್ದೇ ವಿಪರೀತ ಹಾವಳಿ. ಕೆಲವೊಂದು ಪ್ರಕರಣಗಳಲ್ಲಿ ಮನೆ ಮಾಲೀಕರು ಭಿನ್ನ ಧರ್ಮದವರಿಗೆ ಬಾಡಿಗೆ ನೀಡಲು ಒಪ್ಪಿದರೂ ಬೋಕರ್‌ಗಳು ಮಾತ್ರ ಜಾಹೀರಾತಿನಲ್ಲಿ ಇಂತಹ ಧರ್ಮದವರಿಗೆ ಮಾತ್ರ ಎಂದು ಹೇಳಿಕೊಳ್ಳುತ್ತಿದ್ದಾರೆ.
Kshetra Samachara
26/08/2022 05:15 pm