ಮುಲ್ಕಿ: ಪ್ರಧಾನಿ ನರೇಂದ್ರ ಮೋದಿ ಮಂಗಳೂರಿಗೆ ಭೇಟಿ ನೀಡುವ ಹಿನ್ನೆಲೆಯಲ್ಲಿ ಮಾರ್ಗಸೂಚಿ ಬದಲಾಗಿದ್ದು ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಹೋಗುವ ವಾಹನಗಳು ಮುಲ್ಕಿ ಹಾಗೂ ಹಳೆಯಂಗಡಿ ಜಂಕ್ಷನ್ ಬಳಿ ಒಳ ರಸ್ತೆ ಮೂಲಕ ಕಿನ್ನಿಗೋಳಿ ಕಟೀಲು ಮುಖಾಂತರ ಮಾರ್ಗಸೂಚಿ ಗೊತ್ತು ಮಾಡಿದ್ದು, ಮುಲ್ಕಿ ಹಾಗೂ ಹಳೆಯಂಗಡಿ ಜಂಕ್ಷನ್ ಬಳಿ ಟ್ರಾಫಿಕ್ ಪೊಲೀಸರು ಹಾಗೂ ವಾಹನ ಚಾಲಕರ ನಡುವೆ ಮಾತಿನ ಚಕಮಕಿ ನಡೆಯಿತು.
ತೀವ್ರ ಇಕಟ್ಟಿನ ಕಿನ್ನಿಗೋಳಿ ಕಟೀಲು ಬಜಪೆ ಗುರುಪುರ ಮಂಗಳೂರು ರಸ್ತೆಯಲ್ಲಿ ಭಾರಿ ಗಾತ್ರದ ವಾಹನಗಳು ಸಂಚರಿಸಿದ್ದು ಪ್ರಯಾಣಿಕರು ಮಂಗಳೂರಿಗೆ ಸುತ್ತು ಬಳಸಿ ಸಂಚರಿಸುವಂತಾಯಿತು. ಈ ನಡುವೆ ಮುಲ್ಕಿ ಹಾಗೂ ಹಳೆಯಂಗಡಿ ಹೆದ್ದಾರಿಯಲ್ಲಿ ಮಂಗಳೂರು ಸಹಿತ ಇನ್ನಿತರ ಕಡೆ ಹೋಗುವ ಪ್ರಯಾಣಿಕರು ಮಾರ್ಗಸೂಚಿ ಬಗ್ಗೆ ಗೊಂದಲಕ್ಕೀಡಾಗಿ ಸಂಬಂಧಿತ ರಾಜಕಾರಣಿಗಳಿಗೆ ಹಿಡಿ ಶಾಪ ಹಾಕುವುದು ಕಾಣುತ್ತಿತ್ತು. ಆದರೆ ಸುಮಾರು 11 ಗಂಟೆ ಬಳಿಕ ಪೊಲೀಸ್ ವರಿಷ್ಠಾಧಿಕಾರಿಗಳ ಸೂಚನೆ ಮೇರೆಗೆ ಏಕಾಏಕಿ ರಾಷ್ಟ್ರೀಯ ಹೆದ್ದಾರಿಯನ್ನು ಸಂಚಾರ ಮುಕ್ತ ಗೊಳಿಸಲಾಯಿತು.
Kshetra Samachara
02/09/2022 12:20 pm