ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: 'ವೈದ್ಯಕೀಯ ವೆಚ್ಚ ಮರುಪಾವತಿ ರದ್ದು ಆದೇಶ ಹಿಂಪಡೆಯಿರಿ'; ಕೊರಗರ ಒಕ್ಕೂಟ

ಉಡುಪಿ: ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ವಾಸವಾಗಿರುವ ಅಳಿವಿನಂಚಿನಲ್ಲಿರುವ ಮೂಲನಿವಾಸಿ ಆದಿವಾಸಿ ಬುಡಕಟ್ಟು ಸಮುದಾಯಕ್ಕೆ ಸೇರಿದ ಕೊರಗ ಜನಾಂಗದವರಿಗೆ, ಕಳೆದ ಕೆಲವು ವರ್ಷಗಳಿಂದ ಲಭ್ಯವಿದ್ದ 'ಆರೋಗ್ಯ ನಿಧಿ' ವೈದ್ಯಕೀಯ ವೆಚ್ಚ ಮರುಪಾವತಿಯ ಅವಕಾಶವನ್ನು ರದ್ದುಪಡಿಸಿ, ರಾಜ್ಯ ಸರಕಾರ ಆಗಸ್ಟ್‌ 17ರಂದು ಆದೇಶ ಹೊರಡಿಸಿದೆ ಎಂದು ಕರ್ನಾಟಕ ಕೇರಳ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಮಾಜಿ ಅಧ್ಯಕ್ಷೆ ಸುಶೀಲಾ ನಾಡ ಹೇಳಿದ್ದಾರೆ.

ಉಡುಪಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಕಾರದ ಈ ಆದೇಶದ ಕುರಿತಂತೆ ಒಕ್ಕೂಟ, ಮೊನ್ನೆ ಉಡುಪಿಗೆ ಆಗಮಿಸಿದ ರಾಜ್ಯಪಾಲರಿಗೆ ಹಾಗೂ ಉಡುಪಿ ಶಾಸಕರಿಗೆ ಮನವಿ ಸಲ್ಲಿಸಿದೆ.

ಮುಂದಿನ ಒಂದು ತಿಂಗಳೊಳಗೆ ಸರಕಾರ ಆದೇಶವನ್ನು ವಾಪಾಸು ಪಡೆದು, ಕೊರಗರ ವೈದ್ಯಕೀಯ ಚಿಕಿತ್ಸಾ ವೆಚ್ಚವನ್ನು ಮರುಪಾವತಿ ಮಾಡಲು ಒಪ್ಪದಿದ್ದರೆ ಒಕ್ಕೂಟ ಜಿಲ್ಲಾಧಿಕಾರಿ ಕಚೇರಿ ಎದುರು ಉಗ್ರ ಪ್ರತಿಭಟನೆ ನಡೆಸಲಿದೆ ಎಚ್ಚರಿಕೆ ನೀಡಿದರು. ಅಳಿವಿನಂಚಿನಲ್ಲಿರುವ ಕೊರಗ ಸಮುದಾಯಕ್ಕೆ ಸರಕಾರ ಅನ್ಯಾಯ ಮಾಡಿದೆ. ಈ ಆದೇಶವನ್ನು ಶೀಘ್ರ ವಾಪಾಸು ಪಡೆಯಬೇಕು ಎಂದವರು ಆಗ್ರಹಿಸಿದ್ದಾರೆ.

Edited By : Somashekar
Kshetra Samachara

Kshetra Samachara

30/08/2022 05:14 pm

Cinque Terre

6.61 K

Cinque Terre

0

ಸಂಬಂಧಿತ ಸುದ್ದಿ