ಮಂಗಳೂರು: ಮಳೆಹಾನಿಗೆ ನೀಡುವ ಎನ್‌ಡಿಆರ್ ಎಫ್ ಹಾಗೂ ಎಸ್ ಡಿ ಆರ್ ಎಫ್ ಪರಿಹಾರ ಧನದ ಮೊತ್ತವನ್ನು ಹೆಚ್ಚಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕಿರಣ್ ಪೂಣಚ ಸರಕಾರವನ್ನು ಒತ್ತಾಯಿಸಿದರು.
ನಗರದ ಪ್ರೆಸ್ ಕ್ಲಬ್ ನಲ್ಲಿ ಮಾತನಾಡಿದ ಅವರು, ಮನೆ ಕುಸಿತವಾದವರಿಗೆ ಸರಕಾರದಿಂದ ಅತ್ಯಲ್ಪ ಪರಿಹಾರ ದೊರಕುತ್ತದೆ. ಈ ಹಣವನ್ನು ಪರಿಷ್ಕರಿಸಿ ಹೆಚ್ಚು ಹಣ ನೀಡುವಂತೆ ಒತ್ತಾಯಿಸಿದರು.
ಅಡಿಕೆ ಮಾರುಕಟ್ಟೆ ಈಗ ಸ್ಥಿರವಾಗಿದ್ದರೂ ಹೊರಗಡೆಯಿಂದ ಅಡಿಕೆ ಬರುತ್ತಿರುವ, ಮಾರುಕಟ್ಟೆ ಕುಸಿತದ ಬಗ್ಗೆ ಆತಂಕ ಕಾಡುತ್ತಲೇ ಇದೆ. ಆದ್ದರಿಂದ ಕೇಂದ್ರ ಸರಕಾರ ಕಿಲೋಗೆ ಕನಿಷ್ಠ ಆಮದು ಬೆಲೆಯನ್ನು 351ಕ್ಕೆ ಏರಿಸಬೇಕು. ಇದರಿಂದ ಮಾರುಕಟ್ಟೆ ಸ್ಥಿರವಾಗಬಹುದು.
ಅಲ್ಲದೆ ಆಮದು ಆದರೂ ಧಾರಣೆಯಲ್ಲಿ ದೊಡ್ಡ ಹೊಡೆತ ಬೀಳಲು ಸಾಧ್ಯವಿಲ್ಲ. ಅದೇ ರೀತಿ ಕರಾವಳಿ ಭಾಗದಲ್ಲಿ ಭತ್ತದ ಪ್ಯಾಕೇಜ್ ಎಂದು ಪ್ರತಿ ಹೆಕ್ಟೇರ್‌ಗೆ 7,500 ರೂ.ಪ್ರೋತ್ಸಾಹ ಧನ ನೀಡಲಾಗುತ್ತಿತ್ತು. ಆದರೆ ಅದನ್ನು ಯಡಿಯೂರಪ್ಪನವರ ಸರಕಾರದ ಬಳಿಕ ನಿಲ್ಲಿಸಲಾಗಿದೆ. ಆ ಪ್ಯಾಕೆಜ್ ಮತ್ತೆ ದೊರೆಯಬೇಕು ಎಂದು ರವಿಕಿರಣ್ ಪೂಣಚ ಒತ್ತಾಯಿಸಿದರು.
Kshetra Samachara
13/07/2022 03:33 pm