ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ದೇಶದಲ್ಲಿ ಶಾಂತಿ ಸಾಮರಸ್ಯ ಹದಗೆಡಿಸುವ ವಿರುದ್ಧ ಕ್ರಮ ಆಗಲಿ; ಯು.ಟಿ.ಖಾದರ್

ಮಂಗಳೂರು: ದೇಶದಲ್ಲಿ ಶಾಂತಿ ಸಾಮರಸ್ಯ ಹದಗೆಡಿಸುವ ಯಾವುದೇ ಸಂಘಟನೆಯಾದರೂ ಸರಿ ಕ್ರಮ ಆಗಬೇಕು ಎಂದು ಮಂಗಳೂರಿನಲ್ಲಿ ವಿಪಕ್ಷ ಉಪ ನಾಯಕ ಯು.ಟಿ.ಖಾದರ್ ಹೇಳಿದ್ದಾರೆ.

ಇದು ಸರ್ಕಾರದ ಜವಾಬ್ದಾರಿ. ಹಾಗಾಗಿ ಎಲ್ಲಾ ಸಂಘ ಸಂಸ್ಥೆಗಳ ಮೇಲೆ ಕ್ರಮ ಆಗಬೇಕು. ಹಲ್ಲೆ, ಅಶಾಂತಿ, ಕೋಮು ದ್ವೇಷ ಬೀರುವ ಸಂಘಟನೆಗಳ ವಿರುದ್ಧ ಕ್ರಮ ಆಗಲಿ. ತಾರತಮ್ಯವಿಲ್ಲದೆ ಸದುದ್ದೇಶದಿಂದ ಕ್ರಮ ಆಗಲಿ. ಈ ಒಂದು ಕ್ರಮದ ಮೂಲಕ ಭವಿಷ್ಯದಲ್ಲಿ ಸಮಾಜದಲ್ಲಿ ಅಶಾಂತಿ ಕಡಿಮೆಯಾಗಬೇಕು. ಉತ್ತಮ ಸಮಾಜ ನಿರ್ಮಾಣ ‌ಮಾಡಲು ಕ್ರಮಗಳು ಅಗತ್ಯ. ಬ್ಯಾನ್ ಮಾಡುವ ವಿಚಾರದಲ್ಲಿ ಕಾನೂನು ಮತ್ತು ನ್ಯಾಯಾಲಯ ಅದನ್ನ ‌ನೋಡಿಕೊಳ್ಳುತ್ತದೆ. ಸಮಾಜ ಒಡೆಯುವ ಯಾವುದೇ ಸಂಘಟನೆಗಳ ಮೇಲೆ ‌ಕ್ರಮ ಆಗಲಿ ಎಂದರು.

ಸಮಾಜದ ಬಹುತೇಕರಿಗೆ ಪ್ರೀತಿ, ಸೌಹಾರ್ದತೆ ಬೇಕು. ರಾಜಕೀಯವಾಗಿ ಯಾವ ಪರಿಣಾಮ ಆಗುತ್ತದೆ ಎಂಬುದು ನನಗೆ ಗೊತ್ತಿಲ್ಲ.ಸಾಕ್ಷ್ಯಾಧಾರವಿದ್ದಲ್ಲಿ ತಾರತಮ್ಯವಿಲ್ಲದೆ ಕ್ರಮ ತೆಗೆದುಕೊಳ್ಳಬೇಕು. ಕೋಮುದ್ವೇಷದ ಆಧಾರದಲ್ಲಿ ಆದ ಕೊಲೆಗಳು ಸಮಾಜದಲ್ಲಿ ಆಗ್ತಿದೆ. ಸತ್ತಾಗಲೂ ಪರಿಹಾರ ಕೋಡೋದ್ರಲ್ಲಿ ತಾರತಮ್ಯ ಆಗ್ತಿದೆ. ಹೀಗಾಗಿ ಈ ವಿಚಾರದಲ್ಲಿ ಸರ್ಕಾರ ಸಮಾನತೆಯ ಕ್ರಮ ಆಗಬೇಕು ಎಂದು ಖಾದರ್ ಹೇಳಿದರು.

Edited By : Somashekar
PublicNext

PublicNext

28/09/2022 12:19 pm

Cinque Terre

25.61 K

Cinque Terre

1

ಸಂಬಂಧಿತ ಸುದ್ದಿ