ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಆ.10ರಂದು ಕಾಂಗ್ರೆಸ್‌ ನೇತೃತ್ವದಲ್ಲಿ ಪಕ್ಷಾತೀತ ಪಾದಯಾತ್ರೆ

ಮಂಗಳೂರು: ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಆಗಷ್ಟ್‌ 10ರಂದು ಕಾಂಗ್ರೆಸ್ ನೇತೃತ್ವದಲ್ಲಿ ಮಂಗಳೂರು ನಗರದಲ್ಲಿ ಪಕ್ಷಾತೀತ ಪಾದಯಾತ್ರೆ ಆಯೋಜಿಸಲಾಗಿದೆ ಎಂದು ಮಾಜಿ ಶಾಸಕ ಜೆ.ಆರ್. ಲೋಬೊ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಆ.10ರಂದು ಬೆಳಗ್ಗೆ 9:30ಕ್ಕೆ ಪಾಂಡೇಶ್ವರದ ನೆಹರೂ ಪ್ರತಿಮೆಗೆ ಅರ್ಪಿಸಿ ಅಲ್ಲಿಂದ ಎ.ಬಿ. ಶೆಟ್ಟಿ ಸರ್ಕಲ್, ಕ್ಲಾಕ್ ಟವರ್, ಕೊಡಿಯಾಲ್ ಬೈಲ್, ಪಿವಿಎಸ್, ಬೆಸೆಂಟ್ ಆಗಿ ಲಾಲ್ ಬಾಗ್ ವೃತ್ತಕ್ಕೆ ಆಗಮಿಸಿ ಗಾಂಧಿ ಪ್ರತಿಮೆಗೆ ಹಾರವನ್ನು ಹಾಕಿದ ಬಳಿಕ ಪಾದಯಾತ್ರೆ ಸಮಾರೋಪಗೊಳ್ಳಲಿದೆ ಎಂದರು.

ದೇಶ ಪರವಾದ ಘೋಷಣೆಯೊಂದಿಗೆ ಶಿಸ್ತಿನ ಪಾದಯಾತ್ರೆ ಇದಾಗಲಿದ್ದು, ಇದಕ್ಕಾಗಿ ಪೊಲೀಸರಿಂದ ಅನುಮತಿ ಕೂಡ ಪಡೆಯಲಾಗುವುದು ಎಂದು ಜೆ. ಆರ್. ಲೋಬೊ ತಿಳಿಸಿದರು.

Edited By : Somashekar
Kshetra Samachara

Kshetra Samachara

06/08/2022 05:17 pm

Cinque Terre

10.05 K

Cinque Terre

1

ಸಂಬಂಧಿತ ಸುದ್ದಿ