ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪ್ರವೀಣ್ ಹತ್ಯೆ : ಸರ್ಕಾರದ ಬಗ್ಗೆ ವಿಶ್ವಾಸ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ: ಪೇಜಾವರ ಶ್ರೀ ಕಳವಳ

ಉಡುಪಿ: ದ.ಕ ಜಿಲ್ಲೆಯ ಬೆಳ್ಳಾರೆಯಲ್ಲಿ ದುಷ್ಕರ್ಮಿಗಳು ಹಿಂದೂ ಸಂಘಟನೆಯ ಧುರೀಣ ಪ್ರವೀಣ್ ಹತ್ಯೆಗೈದಿರುವ ಘಟನೆಯ ಬಗ್ಗೆ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಇಂತಹ ಹೇಯಕೃತ್ಯ ನಾಗರೀಕ ಸಮಾಜವೇ ತಲೆತಗ್ಗಿಸುವಂತದ್ದಾಗಿದೆ.ಮೃತ ಪ್ರವೀಣನ ಆತ್ಮಕ್ಕೆ ಸದ್ಗತಿ ದೊರೆಯಲಿ ಮತ್ತು ಆತನ ಕುಟುಂಬಸ್ಥರಿಗೆ ಈ ದುಃಖವನ್ನು ಸಹಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿರುವ ಶ್ರೀಗಳು , ನಾಡಿನಲ್ಲಿ ಇಂತಹ ದುಷ್ಕೃತ್ಯಗಳು ಮೇಲಿಂದ ಮೇಲೆ ನಡೀತಾ ಇರೋದ್ರಿಂದ ಜನಾಕ್ರೋಶಗೊಂಡು ಸರ್ಕಾರದ ಮೇಲೆ ಜನ ವಿಶ್ವಾಸವನ್ನೇ ಕಳಕೊಳ್ಳುವ ಸ್ಥಿತಿ ತಲುಪುತ್ತಿರುವಂತಿದೆ.ಅದಕ್ಕೂ ಮೊದಲೇ ಸರ್ಕಾರ ಇಂತಹ ಪಾತಕಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಪ್ರವೀಣನ ಹತ್ಯೆಯಿಂದ ನಾಡಿನ ಸಹಸ್ರಾರು ಹಿಂದೂ ಯುವ ಕಾರ್ಯಕರ್ತರ ಆಕ್ರೋಶ ಉಲ್ಬಣಿಸಲು ಕಾರಣವಾಗುತ್ತಿದೆ. ಇತ್ತೀಚೆಗಷ್ಟೆ ಹರ್ಷನ ಹತ್ಯೆಯ ದುಃಖ ನೋವಿನಿಂದ ಹೊರಬರುವ ಹೊತ್ತಿಗೇ ಇನ್ನೊಬ್ಬ ತರುಣನ ಕೊಲೆಯಾಗಿರೋದು ಸಹನೆಯ ಕಟ್ಟೆ ಒಡೆಯುವಷ್ಟು ದುಃಖ ಆಕ್ರೋಶ ತರಿಸೋದು ಸಹಜವೇ ಆಗಿದ್ದರೂ ಯಾರೊಬ್ಬರೂ ಧೈರ್ಯ ಕಳಕೊಳ್ಳಬಾರದು.ಸಂಯಮವನ್ನು ಒಗ್ಗಟ್ಟನ್ನು ಕಾಯ್ದುಕೊಂಡು ಕೆಲಸ ಮಾಡಬೇಕಾಗಿದೆ. ನಾವು ತಮ್ಮೆಲ್ಲರ ನೋವಿನಲ್ಲಿ ಸಹಾನುವರ್ತಿಗಳು ಎಂದು ಶ್ರೀಗಳು ತಿಳಿಸಿದ್ದಾರೆ.

Edited By : Somashekar
PublicNext

PublicNext

27/07/2022 04:45 pm

Cinque Terre

73.23 K

Cinque Terre

7

ಸಂಬಂಧಿತ ಸುದ್ದಿ