ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ:ಮೊದಲಿದ್ದ ಸ್ಥಳದಲ್ಲೇ ಬಸ್ ತಂಗುದಾಣ ನಿರ್ಮಿಸಿ: ಸ್ಥಳೀಯರಿಂದ ಪ್ರತಿಭಟನೆ!

ಕುಂದಾಪುರ:ಕುಂದಾಪುರ ತಾಲೂಕಿನ ಕಾಳಾವರ ಸರ್ಕಲ್‌ನಲ್ಲಿ ಇದ್ದ ಸಾರ್ವಜನಿಕ ಬಸ್ಸು ತಂಗುದಾಣವನ್ನು ತೆರವುಗೊಳಿಸದಂತೆ ಹಾಗೂ ಹಳೆಯ ಬಸ್ ನಿಲ್ದಾಣ ಇದ್ದ ಸ್ಥಳದಲ್ಲಿಯೇ ಸುಸಜ್ಜಿತ ಬಸ್ಸು ನಿಲ್ದಾಣವನ್ನು ನಿರ್ಮಿಸುವಂತೆ ಆಗ್ರಹಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದರು.

ಕಾಳಾವರ ರಸ್ತೆ ಅಗಲೀಕರಣ ಸಂದರ್ಭ ಸರ್ಕಲ್ ಬಳಿ ಇದ್ದ ಸಾರ್ವಜನಿಕ ಬಸ್ಸು ನಿಲ್ದಾಣವನ್ನು ತೆರವುಗೊಳಿಸಲಾಗಿತ್ತು. ಈ ಸಂದರ್ಭದಲ್ಲಿ ಸ್ಥಳೀಯರಿಗೆ ಹಾಗೂ ವಿದ್ಯಾರ್ಥಿಗಳಿಗೆ ಕೇಂದ್ರ ಸ್ಥಳವಾಗಿದ್ದ ಈ ಬಸ್ಸು ನಿಲ್ಸಾಣವನ್ನು ಮತ್ತೆ ನಿರ್ಮಿಸುವ ಭರವಸೆ ನೀಡಲಾಗಿತ್ತು. ಆದರೆ ರಸ್ತೆ ಅಗಲೀಕರಣ ಕಾಮಗಾರಿ ಮುಗಿದು ಸಾಕಷ್ಟು ಸಮಯವಾಗಿದ್ದರೂ, ತೆರವಾಗಿದ್ದ ಬಸ್ಸು ನಿಲ್ದಾಣದ ಸ್ಥಳದಲ್ಲಿ ನಿಲ್ದಾಣ ಪುನರ್ ನಿರ್ಮಾಣವಾಗದೆ ಇರುವುದರಿಂದ ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯುಂಟಾಗಿತ್ತು. ಈ ಹಿನ್ನೆಲೆಯಲ್ಲಿ ಸಾರ್ವಜನಿಕರೇ ಮುಂದಾಗಿ ತಾತ್ಕಾಲಿಕ ಬಸ್ಸು ನಿಲ್ದಾಣವನ್ನು ನಿರ್ಮಿಸಿದ್ದರು.

ಕೆಲ ರಾಜಕೀಯ ಕಾರಣಗಳಿಂದಾಗಿ ತಾತ್ಕಾಲಿಕವಾಗಿ ನಿರ್ಮಿಸಿರುವ ಬಸ್ ನಿಲ್ದಾಣದ ತೆರವಿಗೆ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸುವ ಸ್ಥಳೀಯರು, ಕಾಳಾವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಳಾವರ, ಅಸೋಡು, ವಕ್ವಾಡಿಯ ಮೂರು ಗ್ರಾಮಗಳ ಗ್ರಾಮಸ್ಥರಿಗೆ ಅನುಕೂಲವಾಗುವಂತೆ ಈ ಹಿಂದೆ ಪಂಚಾಯಿತಿ ನೀಡಿರುವ ಭರವಸೆಯಂತೆ ಮೊದಲು ಇದ್ದ ಸ್ಥಳದಲ್ಲಿಯೇ ಬಸ್ಸು ನಿಲ್ದಾಣವನ್ನು ನಿರ್ಮಿಸಿಕೊಡಬೇಕು. ಹೊಸ ಬಸ್ಸು ನಿಲ್ದಾಣ ಆರಂಭವಾಗುವವರೆಗೂ ಪ್ರಸ್ತುತ ತಾತ್ಕಾಲಿಕವಾಗಿ ನಿರ್ಮಿಸಿರುವ ಬಸ್ಸು ನಿಲ್ದಾಣವನ್ನು ತೆರವು ಮಾಡಕೂಡದು ಎಂದು ಕುಂದಾಪುರ ಉಪ ವಿಭಾಗಾಧಿಕಾರಿಗಳಿಗೆ ಮನವಿ ನೀಡಿದರು.

Edited By : Somashekar
Kshetra Samachara

Kshetra Samachara

26/07/2022 07:52 pm

Cinque Terre

6.11 K

Cinque Terre

0

ಸಂಬಂಧಿತ ಸುದ್ದಿ