ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಟ್ವಾಳ: "ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೀಸಲಾತಿ ಪಾಲನೆ ಆಗುತ್ತಿಲ್ಲ"

ಬಂಟ್ವಾಳ: ದ.ಕ.ಜಿಲ್ಲೆಯ ಅರಣ್ಯ, ಪೊಲೀಸ್, ಕಂದಾಯ ಇಲಾಖೆಗಳಲ್ಲಿ ಮೀಸಲಾತಿ ಪಾಲನೆ ಆಗುತ್ತಿಲ್ಲ ಎಂದು ರಾಜ್ಯ ಸರ್ಕಾರಿ ಎಸ್.ಸಿ.- ಎಸ್.ಟಿ. ನೌಕರರ ಸಂಘದ ಅಧ್ಯಕ್ಷ ಡಿ.ಚಂದ್ರಶೇಖರಯ್ಯ ಆಪಾದಿಸಿದ್ದಾರೆ.

ಬಂಟ್ವಾಳದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೌಕರರಿಗೆ ಅನ್ಯಾಯವಾದರೆ, ಯಾರು ಹಾಗೆ ಮಾಡುತ್ತಾರೋ ಅವರ ಮೇಲೆ ಅಟ್ರಾಸಿಟಿ ಕೇಸ್ ಹಾಕಿ ಜೈಲಿಗೆ ಕಳುಹಿಸುವ ಕೆಲಸ ಮಾಡಲಾಗುವುದು ಎಂದರು.

ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಎಸ್.ಸಿ., ಎಸ್.ಟಿ. ನೌಕರರಿಂದ ದೂರುಗಳು ಬರುತ್ತಿವೆ. ಪ್ರಮೋಶನ್ ಕೊಡುವುದನ್ನು ತಪ್ಪಿಸುವುದು ಅಥವಾ ನಿಧಾನಗತಿ ಮಾಡಲಾಗುತ್ತಿದೆ ಎಂದರು.

ಬಡ್ತಿ ಕೊಡದೇ ಇದ್ದರೆ, ಆರ್ಥಿಕ, ಸಾಮಾಜಿಕ ನಷ್ಟ ಉಂಟುಮಾಡುವುದೂ ಅಟ್ರಾಸಿಟಿಯಲ್ಲಿ ಬರುತ್ತದೆ ಎಂದು ಹೇಳಿದ ಅವರು, ಬಡ್ತಿ ಮೀಸಲಾತಿ ಕುರಿತು ನೌಕರರಿಗೆ ತರಬೇತಿ ನೀಡಲಾಗಿದೆ. ಮಂಗಳೂರು ಭಾಗದಲ್ಲಿ ರಾಜ್ಯ ಸಮಿತಿಗೆ ಮೀಸಲಾತಿ ಪಾಲನೆ ಸರಿಯಾಗಿ ಆಗುತ್ತಿಲ್ಲ ಎನ್ನಲಾಗುತ್ತಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಅಧಿಕಾರಿಗಳಾದ ಬಿ.ಸುಬ್ಬಯ್ಯ ನಾಯ್ಕ್, ರಾಜೇಶ್ ಬಳಿಗಾರ್, ಸಂತೋಷ್ ಪವಾರ್, ಜಿಲ್ಲಾ ದಲಿತ್ ಸೇವಾ ಸಮಿತಿಯ ಸ್ಥಾಪಕಾಧ್ಯಕ್ಷ ಬಿ.ಕೆ.ಸೇಸಪ್ಪ ಬೆದ್ರಕಾಡು, ಅಧ್ಯಕ್ಷ ಚಂದ್ರಶೇಖರ್ ಉಪಸ್ಥಿತರಿದ್ದರು.

Edited By : Somashekar
Kshetra Samachara

Kshetra Samachara

12/06/2022 10:44 pm

Cinque Terre

24.79 K

Cinque Terre

0

ಸಂಬಂಧಿತ ಸುದ್ದಿ