ಉಡುಪಿ: ಕಾಶ್ಮೀರದಲ್ಲಿ 370 ನೇ ವಿಧಿ ರದ್ಧತಿ ನಂತರವೂ ಕಾಶ್ಮೀರ ಪಂಡಿತರ ಹತ್ಯೆ ಸರಣಿ ಕುರಿತ ಪ್ರಶ್ನೆಗೆ ಉತ್ತರಿಸಿದ ಸಚಿವ ಕೋಟ ಶ್ರೀನಿವಾಸ್ ಪೂಜಾರಿ , 370 ನೇ ವಿಧಿ ರದ್ಧತಿಯ ಹಿನ್ನೆಲೆಯಲ್ಲಿ ಕಣಿವೆಯಲ್ಲಿ ಶಾಂತಿ ಸುವ್ಯವಸ್ಥೆ ನೆಲೆಸಿತ್ತು.
ಆದರೆ ಇದೀಗ ಮತ್ತೊಮ್ಮೆ ಹಿಂಸೆ ಆರಂಭ ಗೊಂಡಿದೆ. ಇದನ್ನು ಸರಕಾರದ ವೈಫಲ್ಯವೆಂದು ಹೇಳುವುದಕ್ಕಿಂತ ಅನಾಗರಿಕತೆ ಹಾಗೂ ಅತ್ಯಂತ ಹೇಡಿತನದ ಕೃತ್ಯ ಎಂದು ಹೇಳಬಹುದು.
ಈ ಪಾಕಿಸ್ತಾನಿ ಪ್ರೇರಿತ ಭಯೋತ್ಪಾದಕರು ಈಗ ಹತಾಶರಾಗಿ ಇಂತಹ ಕುಕೃತ್ಯ ನಡೆಸುತ್ತಿದ್ದಾರೆ.ಅಲ್ಲಿ ಭಯೋತ್ಪಾದನೆಯನ್ನು ಮಟ್ಟ ಹಾಕಲು ಸರಕಾರ ಎಲ್ಲ ರೀತಿಯ ಕ್ರಮ ತೆಗೆದುಕೊಳ್ಳುತ್ತದೆ ಎಂದು ತಿಳಿಸಿದರು.ಅವರು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದರು.
Kshetra Samachara
08/06/2022 11:52 am