ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಹಿಜಾಬ್ ಗಾಗಿ ಮುಂದುವರೆದ ವಿದ್ಯಾರ್ಥಿನಿಯರ ಪ್ರತಿಭಟನೆ: ಮುಂದೇನು?

ವರದಿ: ರಹೀಂ ಉಜಿರೆ

ಉಡುಪಿ ; ಉಡುಪಿ ಸರ್ಕಾರಿ ಕಾಲೇಜಿನ ಹಿಜಾಬ್ ವಿವಾದ ಮತ್ತಷ್ಟು ಕಗ್ಗಂಟಾಗಿ ಪರಿಣಮಿಸಿದೆ. ಹಿಜಾಬ್ ಧರಿಸಿಯೇ ಕ್ಲಾಸ್ ಕೇಳುವುದಾದರೆ ಕಾಲೇಜಿಗೆ ಬರಬೇಡಿ ಎಂದು ನಿನ್ನೆಯ ಸಭೆಯಲ್ಲಿ ಹೇಳಲಾಗಿತ್ತು.ಆದರೆ ಇವತ್ತು ಆರು ವಿದ್ಯಾರ್ಥಿನಿಯರು ಕಾಲೇಜಿಗೆ ಆಗಮಿಸಿ ತಮ್ಮ ಹೋರಾಟ ಮುಂದುವರೆಸಿದ್ದಾರೆ!

ಈ ಆರು ಮಂದಿ ವಿದ್ಯಾರ್ಥಿನಿಯರು ಈಗಾಗಲೇ ಹೈಕೋರ್ಟ್ ಕದ ತಟ್ಟಿದ್ದು ,ಹೋರಾಟ ಮುಂದುವರೆಸಲು ತೀರ್ಮಾನಿಸಿದ್ದಾರೆ. ನಿನ್ನೆ ಸ್ಥಳೀಯ ಶಾಸಕ, ಕಾಲೇಜು ಅಭಿವೃದ್ಧಿ ಮಂಡಳಿ ಅಧ್ಯಕ್ಷ,ಶಾಸಕ ರಘಪತಿ ಭಟ್, ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ, ಪ್ರತಿಭಟನಾ ನಿರತ ವಿದ್ಯಾರ್ಥಿನಿಯರು ಹಾಗೂ ಪ್ರತಿಭಟನಾನಿರತ ವಿದ್ಯಾರ್ಥಿನಿಯರ ಪೋಷಕರನ್ನು ಜೊತೆ ಸೇರಿಸಿ ಸಭೆ ನಡೆಸಲಾಗಿತ್ತು. ಸಭೆಯಲ್ಲಿ ಪೋಷಕರಿಗೆ ತಿಳಿ ಹೇಳಿ, ಯಾವುದೇ ಕಾರಣಕ್ಕೂ ಹಿಜಾಬ್ ಧರಿಸಿ ಕ್ಲಾಸ್ ಕೇಳುವುದಕ್ಕೆ ಅವಕಾಶ ಇಲ್ಲ. ಅದಕ್ಕೂ ಒಪ್ಪದಿದ್ರೆ ಆನ್ಲೈನ್ ಕ್ಲಾಸ್‌ಗೆ ಅವಕಾಶ ನೀಡಲಾಗುವುದು. ಅದೂ ಆಗಲ್ಲ ಅಂದರೆ ಕಾಲೇಜು ಆವರಣಕ್ಕೆ ಬರಬಾರದು ಎಂದು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು. ಸಭೆಯಲ್ಲಿ ಬಾಗಿಯಾಗಿದ್ದ ವಿದ್ಯಾರ್ಥಿನಿಯರು ನಾಳೆ ನಮ್ಮ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಹೇಳಿದ್ದರು.ಆದರೆ ಇಂದು ಮತ್ತದೇ ರಾಗ ಅದೇ ಹಾಡು ಎಂಬ ಪರಿಸ್ಥಿತಿ ನಿರ್ಮಾಣ ಆಗಿದೆ. ಆವರಣದ ಒಳಗೆ ಬರಕೂಡದು ಎಂದು ಹೇಳಿದ್ದರೂ, ಆರು ವಿದ್ಯಾರ್ಥಿನಿಯರು ಬಂದು ಪ್ರತಿಭಟನೆ ಮುಂದುವರಿಸಿದ್ದಾರೆ. ಹಿಜಾಬ್ ಧರಿಸುವುದು ನಮ್ಮ ಹಕ್ಕು, ಹಿಜಾಬ್ ಧರಿಸಿಯೇ ಪಾಠ ಕೇಳುತ್ತೇವೆ ಎಂದು ಪಟ್ಟು ಹಿಡಿದಿದ್ದಾರೆ.

ಇನ್ನು ಹಿಜಾಬ್ ವಿವಾದ ತೀವ್ರವಾಗುತ್ತಿದ್ದಂತೆ ಕಾಲೇಜು ಆವರಣದ ಒಳಗೆ ಪೊಲೀಸ್ ಭದ್ರತೆ ಬಿಗಿಗೊಳಿಸಲಾಗಿದೆ. ಒಟ್ಟಿನಲ್ಲಿ ನಿನ್ನೆಗೆ ಹಿಜಾಬ್ ವಿವಾದ ತಣ್ಣಗಾಯ್ತ ಎಂದುಕೊಳ್ಳುವಾಗಲೇ ಮತ್ತೆ ಹಿಜಾಬ್ ವಿವಾದ ಹೆಡೆ ಎತ್ತಿದೆ. ಮುಸ್ಲಿಂ ವಿದ್ಯಾರ್ಥಿನಿಯರ ಪ್ರತಿಭಟನೆ, ಒಳಗೆ ಪಾಠ ಕೇಳುತ್ತಿರುವ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀಳದೇ ಇರಲಿ ಅನ್ನೋದು ಸದ್ಯಕ್ಕೆ ಸಾರ್ವಜನಿಕರ ಮನದಾಶಯವಾಗಿದೆ.

Edited By : Nagesh Gaonkar
PublicNext

PublicNext

01/02/2022 06:27 pm

Cinque Terre

42.42 K

Cinque Terre

8

ಸಂಬಂಧಿತ ಸುದ್ದಿ