ವರದಿ: ರಹೀಂ ಉಜಿರೆ
ಉಡುಪಿ: ಉಡುಪಿಯ ಸರಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಭುಗಿಲೆದ್ದ ಸ್ಕಾರ್ಫ್/ ಹಿಜಾಬ್ ವಿವಾದ ಇನ್ನೂ ತಣ್ಣಗಾಗಿಲ್ಲ.ಸ್ಕಾರ್ಫ್ ಧರಿಸಿ ತರಗತಿಗೆ ಬರುತ್ತೇವೆ ಎಂದು ತಿಂಗಳ ಹಿಂದೆ ಆರೆಂಟು ವಿದ್ಯಾರ್ಥಿನಿಯರು ಬೇಡಿಕೆ ಇಟ್ಟಿದ್ದರು.ಅದು ಕೊನೆಗೆ ಸರಕಾರ ಮಟ್ಟಕ್ಕೆ ತಲುಪಿ ,ಅಲ್ಲಿ ವಸ್ತ್ರ ಸಂಹಿತೆಯಮ್ನು ಯಥಾಸ್ಥಿತಿ ಪಾಲಿಸಬೇಕು ಎಂಬ ನಿರ್ಣಯ ಎರಡು ದಿನಗಳ ಹಿಂದೆ ಬಂದಿತ್ತು.
ಈ ಮಧ್ಯೆ ಪೋಷಕರು ಮತ್ತು ಮುಸ್ಲಿಂ ಮುಖಂಡರ ಜೊತೆ ಸಭೆ ನಡೆಸಿದ ಶಾಸಕರ ರಘುಪತಿ ಭಟ್ ,ಸದ್ಯ ಮುಂದಿನ ಆದೇಶದವರೆಗೆ ಮುಸ್ಲಿಂ ವಿದ್ಯಾರ್ಥಿನಿಯರು ಇತರೆ ಮಕ್ಕಳಂತೆಯೇ ಸಮವಸ್ತ್ರದಲ್ಲಿ ಬರಬೇಕು.ಬರಲಾಗದಿದ್ದರೆ ಆನ್ ಲೈನ್ ಕ್ಲಾಸ್ ನಡೆಸಿ ,ಅವರ ಒಂದು ತಿಂಗಳ ಅಟೆಂಡನ್ಸ್ ನ್ನೂ ಕೊಡುತ್ತೇವೆ ಎಂಬ ತೀರ್ಮಾನಕ್ಜೆ ಬಂದಿದ್ದರು.
ಆದರೆ ಇದರಿಂದಲೂ ತೃಪ್ತರಾಗದ ವಿದ್ಯಾರ್ಥಿನಿಯರು ,ನಮಗೆ ಆನ್ ನೈನ್ ಕ್ಲಾಸ್ ಬೇಡ.ಆ ಉಳಿದ ವಿದ್ಯಾರ್ಥಿಗಳ ರೀತಿಯಲ್ಲೇ ಆಫ್ ಲೈನ್ ,ಫಿಸಿಕಲ್ ಕ್ಲಾಸ್ ಬೇಕು. ನಮ್ಮ1 ತಿಂಗಳ ತರಗತಿ ನಷ್ಟ ಆಗಿದೆ . ಕಾಲೇಜಿನ ಉಳಿದ ಮುಸಲ್ಮಾನ ವಿದ್ಯಾರ್ಥಿನಿಯರು ಹಿಜಬ್ ಧರಿಸಲು ಸಿದ್ಧರಿದ್ದಾರೆ. ನಮ್ಮ ಮೇಲೆ ನಡೆಯುತ್ತಿರುವ ದೌರ್ಜನ್ಯದಿಂದ ಅವರು ಭಯ ಗೊಂಡಿದ್ದಾರೆ. ಸರ್ಕಾರಿ ಕಾಲೇಜು ಆಗಿರುವುದರಿಂದ ನಮ್ಮ ಹಕ್ಕನ್ನು ಕೇಳುತ್ತಿದ್ದೇವೆ. ತಾರತಮ್ಯವನ್ನು ಮಾಡಬೇಡಿ. ನಮಗೆ ನಡೆಯುತ್ತಿರುವ ದೌರ್ಜನ್ಯ ಪ್ರತಿದಿನ ಮಾಧ್ಯಮಗಳಲ್ಲಿ ನಮ್ಮ ಸುದ್ದಿಗಳನ್ನು ನೋಡಿ ಇತರ ಮುಸ್ಲಿಂ ವಿದ್ಯಾರ್ಥಿನಿಯರು ಆತಂಕಗೊಂಡಿದ್ದಾರೆ. ಅವರು ನೈತಿಕವಾಗಿ ನಮಗೆ ಬೆಂಬಲ ಸೂಚಿಸಿದ್ದಾರೆ. ಆದರೆ ಯಾರೂ ಮುಂದೆ ಬರುತ್ತಿಲ್ಲ ಎಂದು ಹೇಳಿದ್ದಾರೆ.
ಅನ್ ಲೈನ್ ಕ್ಲಾಸ್ ಯಾವ ರೀತಿ ನಡೆಯುತ್ತದೆ? ಉಳಿದ ವಿದ್ಯಾರ್ಥಿಗಳಿಗೆ ಮಾಡುವಾಗಲೇ ನಮಗೂ ತರಗತಿ ಮಾಡುತ್ತಾರೆಯೇ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ.ಒಟ್ಟಾರೆ ನಮಗೂ ಉಳಿದ ವಿದ್ಯಾರ್ಥಿಗಳ ಜೊತೆ ಕುಳಿತು ಪಾಠ ಕೇಳುವ ಹಕ್ಕು ಇದೆ ಎಂದು ಹೇಳಿದ್ದಾರೆ.
ಒಟ್ಟಾರೆ ಸ್ಕಾರ್ಫ್ ವಿವಾದ ಇನ್ನೂ ಮುಂದುವರೆದಿದ್ದು ಮುಂದೆ ಯಾವ ತಿರುವು ಪಡೆದುಕೊಳ್ಳುತ್ತದೋ ಕಾದು ನೋಡಬೇಕಿದೆ.
PublicNext
27/01/2022 06:20 pm