ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರಿನ ಲೇಡಿಹಿಲ್ ಸರ್ಕಲ್ ಗೆ ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರಿಟ್ಟರೆ ತಪ್ಪಿಲ್ಲ

ಉಡುಪಿ: ಮಂಗಳೂರಿನಲ್ಲಿ ಬ್ರಿಟಿಷರ ನೆನಪಿಗಾಗಿ ಇರುವ ಲೇಡಿಹಿಲ್ ಸರ್ಕಲ್ ಗೆ ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರನ್ನು ಮರುನಾಮಕರಣ ಮಾಡುವಂತೆ ಒತ್ತಾಯಿಸಿರುವ ಪ್ರೆಂಡ್ಸ್ ಬಳ್ಳಾಲ್ಬಾಗ್ ಬಿರುವೆರ್ ಕುಡ್ಲ(ರಿ) ಸಂಘಟನೆಯ ಕಾರ್ಯಕ್ಕೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಬೆಂಬಲ ಸೂಚಿಸಿದ್ದಾರೆ.

ಸಮಾನತೆ ಮತ್ತು ಮಾನವೀಯತೆಯನ್ನು ವಿಶ್ವಕ್ಕೇ ಸಾರಿದವರು ಬ್ರಹ್ಮಶ್ರೀ ನಾರಾಯಣ ಗುರುಗಳು.ಸಿದ್ಧರಾಮಯ್ಯನವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಮತ್ತು ನಾನು ಮಂತ್ರಿ ಆಗಿದ್ದಾಗ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿಯನ್ನು ಸರಕಾರದ ವತಿಯಿಂದ ರಾಜ್ಯ,ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ಆಚರಿಸಲು ಪ್ರಾರಂಭಿಸಿದೆವು.

ಇದು ನನಗೆ ಬಹಳ ಖುಷಿ ತಂದ ವಿಷಯ.ಇಂತಹ ಮಹಾನ್ ವ್ಯಕ್ತಿಯ ಹೆಸರನ್ನು‌ ಲೇಡಿಹಿಲ್ ಸರ್ಕಲ್ ಗೆ ಮರುನಾಮಕರಣ ಮಾಡುವ ಮೂಲಕ ಆ ಮಹಾನ್ ನಾಯಕನ ಹೆಸರನ್ನು ಚಿರಸ್ಥಾಯಿಯನ್ನಾಗಿ ಮಾಡಬೇಕು ಎಂದು ಪ್ರಮೋದ್ ಮಧ್ವರಾಜ್ ಒತ್ತಾಯಿಸಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

25/09/2020 11:39 am

Cinque Terre

27.72 K

Cinque Terre

2

ಸಂಬಂಧಿತ ಸುದ್ದಿ