ಮಂಗಳೂರು: ಉಕ್ರೇನ್ ನಲ್ಲಿ ಸಿಲುಕಿರೋ ಮಂಗಳೂರಿನ ವೈದ್ಯಕೀಯ ವಿದ್ಯಾರ್ಥಿನಿಯರ ಮನೆಗೆ ನಳಿನ್ ಕುಮಾರ್ ಕಟೀಲ್ ಕಟೀಲ್, ಶಾಸಕ ವೇದವ್ಯಾಸ ಕಾಮತ್ ಭೇಟಿ ನೀಡಿ ವಿದ್ಯಾರ್ಥಿಗಳ ಕುಟುಂಬಕ್ಕೆ ಧೈರ್ಯ ತುಂಬಿದರು.
ಇದೇ ವೇಳೆ ಮಾತನಾಡಿದ ಸಂಸದ ನಳಿನ್ಕುಮಾರ್ ಕಟೀಲ್ ಅವರು ದ.ಕ ಜಿಲ್ಲೆಯ 18 ಜನರು ಸರ್ಕಾರದ ಅಂಕಿಅಂಶಗಳ ಪ್ರಕಾರ ಉಕ್ರೇನ್ ನಲ್ಲಿದ್ದಾರೆ. ಈಗಾಗಲೇ ಅವರ ಮನೆಯವರು ಮತ್ತು ವಿದ್ಯಾರ್ಥಿಗಳ ಜೊತೆ ನಾವು ನಿರಂತರ ಸಂಪರ್ಕದಲ್ಲಿದ್ದೇವೆ. ಸದ್ಯ ನಾಲ್ಕು ಮಂತ್ರಿಗಳನ್ನ ನೇಮಿಸಿ ಅವರನ್ನು ಕರೆ ತರುವ ಪ್ರಯತ್ನ ಆಗ್ತಿದೆ. ಕೆಲವರು ಈಗಾಗಲೇ ವಿಮಾನ ಹತ್ತಿದ್ದಾರೆ, ಇನ್ನು ಕೆಲವರು ಬಂಕರ್ ನಲ್ಲೇ ಇದ್ದಾರೆ.ಪಕ್ಷದ ವತಿಯಿಂದಲೂ ವಾರ್ ರೂಂ ತೆರೆದು ಮನೆಯವರ ಸಂಪರ್ಕ ಮಾಡ್ತಿದ್ದೇವೆ. ಮಂಗಳೂರು ನಗರದ ಐದು ಕುಟುಂಬದ ಬಳಿ ತೆರಳಿ ಅವರಿಗೆ ವಿಶ್ವಾಸ ತುಂಬಿದ್ದೇವೆ. ನಿನ್ನೆ ಅಹಿತಕರ ಮತ್ತು ದುಃಖದ ಘಟನೆ ಉಕ್ರೇನ್‌ನಲ್ಲಿ ನಡೆದಿದೆ ಎಂದರು.
PublicNext
02/03/2022 01:05 pm