ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಹೆದ್ದಾರಿ ಗುಂಡಿಯಲ್ಲೇ ಉರುಳುಸೇವೆ ಮಾಡಿ ಪ್ರತಿಭಟನೆ..!

ಉಡುಪಿ: ಉಡುಪಿ ಮಣಿಪಾಲ ರಾಷ್ಟ್ರೀಯ ಹೆದ್ದಾರಿ ಇಂದ್ರಾಳಿ ರೈಲ್ವೆ ಸೇತುವೆ ಬಳಿ, ಸಂಪೂರ್ಣ ಹದಗೆಟ್ಟಿದೆ. ಮಳೆಗಾಲಕ್ಕೆ ಹೆದ್ದಾರಿ ಸಂಪೂರ್ಣ ಹೊಂಡಮಯವಾಗಿದ್ದು ವಾಹನ ಸವಾರರು ಹಿಡಿಶಾಪ ಹಾಕಿ ಮುಂದೆ ಸಾಗಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿದೆ. ಈ ಹಿನ್ನೆಲೆಯಲ್ಲಿ ಪ್ರತಿಭಟನಾರ್ಥ ಇವತ್ತು ಸಮಾಜಸೇವಕ ನಿತ್ಯಾನಂದ ಒಳಕಾಡು ಕೆಸರು ರಸ್ತೆಯಲ್ಲೇ ಉರುಳುಸೇವೆ ಮಾಡುವ ಮೂಲಕ ರಾಜಕಾರಣಿಗಳ ಗಮನ ಸೆಳೆಯುವ ಪ್ರಯತ್ನ ಮಾಡಿದರು.

ಸುಮಾರು 15 ನಿಮಿಷ ಇಂದ್ರಾಳಿ ಸೇತುವೆ ಮೇಲಿನ ರಸ್ತೆಯಲ್ಲಿ ಸುರಿಯುವ ಮಳೆಯನ್ನೂ ಲೆಕ್ಕಿಸದೆ ಉರುಳುಸೇವೆ ಮಾಡಿದರು. ವಾಹನ ನಿಬಿಡ ಹೆದ್ದಾರಿ ಇದಾಗಿದ್ದು ಇವರು ಉರುಳು ಸೇವೆ ಮಾಡುವಾಗ ಪೊಲೀಸರು ಕೆಲ ಹೊತ್ತು ರಸ್ತೆ ಸಂಚಾರ ಬಂದ್ ಮಾಡಿದರು. ಸರಿಯುವ ಮಳೆಯಲ್ಲಿ ಹೊಂಡದ ರಸ್ತೆಯಲ್ಲಿ ಉರುಳುಸೇವೆ ಮಾಡುತ್ತಿದ್ದ ನಿತ್ಯಾನಂದರನ್ನು ನೋಡಿದ ಜನ ,ಇನ್ನಾದರೂ ರಸ್ತೆ ರಿಪೇರಿಯಾಗಲಿ ಎಂದು ಪ್ರತಿಭಟನೆಗೆ ಬೆಂಬಲ ಸೂಚಿಸಿದರು.

ಬಳಿಕ ಮಾತನಾಡಿದ ಅವರು, ಪ್ರಧಾನಿ ಮೋದಿ ಬಂದಾಗ ರಸ್ತೆ ರಿಪೇರಿಯಾಗುತ್ತದೆ.ಇಲ್ಲಿಗೂ ಅವರು ಬರಲಿ.ಜನ ಈ ರಸ್ತೆಯಲ್ಲಿ ಸಾಯುತ್ತಿದ್ದಾರೆ.ಹಲವು ಅಪಘಾತಗಳು ನಿತ್ಯ ಸಂಭವಿಸುತ್ತಿವೆ.ಆದರೂ ಜನಪ್ರತಿನಿಧಿಗಳಿಗೆ ಅರ್ಥವಾಗುತ್ತಿಲ್ಲ. ಅವರ ಗಮನ ಸೆಳೆಯಲು ಉರುಳುಸೇವೆ ಪ್ರತಿಭಟನೆ ಹಮ್ಮಿಕೊಂಡಿದ್ದಾಗಿ ಹೇಳಿದರು.

Edited By : Shivu K
Kshetra Samachara

Kshetra Samachara

13/09/2022 12:18 pm

Cinque Terre

5.7 K

Cinque Terre

8

ಸಂಬಂಧಿತ ಸುದ್ದಿ