ಮಂಗಳೂರು: ಸೆ.2ರಂದು ಮಂಗಳೂರಿಗೆ ಭೇಟಿ ನೀಡಲಿರುವ ಪಿಎಂ ಮೋದಿಯವರು ನಗರದ ಬಂಗ್ರ ಕೂಳೂರಿನ ಗೋಲ್ಡ್ ಫಿಂಚ್ ಸಿಟಿ ಮೈದಾನದಲ್ಲಿ ಬೃಹತ್ ಸಮಾವೇಶದಲ್ಲಿ 3,800 ಕೋಟಿ ರೂ. ಮೊತ್ತದ 8 ಯೋಜನೆಗಳನ್ನು ಲೋಕಾರ್ಪಣೆ ಹಾಗೂ ಶಿಲಾನ್ಯಾಸ ನೆರವೇರಿಸಲಿದ್ದಾರೆ.
ಕಂಟೈನರ್ ಗಳು ಹಾಗೂ ಇತರ ಸರಕು ನಿರ್ವಹಣೆಗಾಗಿ ಎನ್ಎಂಪಿಎಯ ಬರ್ತ್ ಸಂಖ್ಯೆ 14ರ ಯಾಂತ್ರೀಕರಣ (281 ಕೋಟಿ ರೂ.), ಬಿಎಸ್ VI ಉನ್ನತೀಕರಣ ಯೋಜನೆ (1829 ಕೋಟಿ ರೂ.), ಸಮುದ್ರ ನೀರಿನ ಸಂಸ್ಕರಣಾ ಘಟಕಗಳು (677 ಕೋಟಿ ರೂ.) ಲೋಕಾರ್ಪಣೆ ಆಗಲಿದೆ.
ಇದೇ ಸಂದರ್ಭ ನರೇಂದ್ರ ಮೋದಿ , ಎನ್‌ಎಂಪಿಎಯ ಸಮಗ್ರ ಎಲ್ ಪಿಜಿ ಹಾಗೂ ಬೃಹತ್ ಪಿಓಎಲ್ ಸೌಲಭ್ಯ (500 ಕೋಟಿ ರೂ.), ಶೇಖರಣಾಗಾರ ಹಾಗೂ ಖಾದ್ಯ ತೈಲ ಸಂಸ್ಕರಣಾಗಾರ ನಿರ್ಮಾಣ (100 ಕೋಟಿ ರೂ.) , ಬೆಟುಮಿನ್ ಶೇಖರಣಾ ಘಟಕಗಳ ನಿರ್ಮಾಣ ( 100 ಕೋಟಿ ರೂ.) ಹಾಗೂ ಬೆಟುಮಿನ್ ಖಾದ್ಯ ತೈಲ ಶೇಖರಣಾ ಘಟಕ ಹಾಗೂ ಸಂಬಂಧಿತ ಸೌಲಭ್ಯಗಳ ನಿರ್ಮಾಣ (100 ಕೋಟಿ ರೂ.) ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಜೊತೆಗೆ ಕುಳಾಯಿಯಲ್ಲಿನ ಮೀನುಗಾರಿಕಾ ಬಂದರು ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
PublicNext
01/09/2022 08:02 pm