ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ರಸ್ತೆ ಅವ್ಯವಸ್ಥೆ; ಶಾಸಕರನ್ನು ತರಾಟೆಗೆ ತೆಗೆದುಕೊಂಡ ಯುವತಿ ವೀಡಿಯೊ ವೈರಲ್

ಉಡುಪಿ: ಉಡುಪಿ ಜಿಲ್ಲೆಯ ಪರಂಪಳ್ಳಿ ಮಣಿಪಾಲದ ರಸ್ತೆಗಳ ಅವ್ಯವಸ್ಥೆಯ ಬಗ್ಗೆ ಉಡುಪಿ ಶಾಸಕ ರಘುಪತಿ ಭಟ್ ಅವರನ್ನು ತರಾಟೆಗೆ ತೆಗೆದುಕೊಂಡಿರುವ ವೀಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವೀಡಿಯೊದಲ್ಲಿ ಮಣಿಪಾಲದ ಯುವತಿಯೊಬ್ಬರು “ನಾವು ಇಷ್ಟು ವರ್ಷಗಳಿಂದ ಟೋಲ್ ಕಟ್ಟುತ್ತಿದ್ದೇವೆ. ರಸ್ತೆ ತೆರಿಗೆ, ವಾಹನ ತೆರಿಗೆ ಕಟ್ಟುತ್ತಿದ್ದೇವೆ. ಆದರೆ ನೀವು, ನಾವು ರಸ್ತೆ ಮಾಡಿದ್ದೇವೆ, ಚರಂಡಿ ಮಾಡಿದ್ದೇವೆ ಅಂತೀರಿ. ನೀವು ಯಾವುದಾದರೂ ಕೆಲಸ ಸರಿಯಾಗಿ ಮಾಡಿದ್ದೀರಾ? ನಿಮ್ಮ ಮನೆಗೆ ಪೆರಂಪಳ್ಳಿಯ ಇದೇ ಮಾರ್ಗವಾಗಿ ಹೋಗುತ್ತಿರಲ್ವಾ, ನಿಮಗೆ ಸ್ವಲ್ಪವಾದರೂ ಬೇಜಾರಾಗುತ್ತಿಲ್ಲವೇ?” ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

“ನೀವು ಸರ್ಕಾರಿ ವಾಹನದಲ್ಲಿ ಹೋಗುತ್ತೀರಿ, ನಿಮಗೆ ರಸ್ತೆ ಹೊಂಡದ ಪರಿವೇ ಇಲ್ಲ. ನಮ್ಮ ವಾಹನ, ನಮಗೆ ಏನಾದರೂ ಆದರೆ, ನಾವು ಯಾರ ಬಳಿ ಹೋಗುವುದು, ಅಸ್ಪತ್ರೆ ಹಣ, ವಾಹನ ಹಣ ನೀವು ಕೊಡುತ್ತೀರಾ?” ಎಂದು ಪ್ರಶ್ನಿಸಿದ್ದಾರೆ. "ನೀವು ಅಂಬಾಗಿಲು ಪೆರಂಪಳ್ಳಿ ಹೋಗುವ ರಸ್ತೆ ಪೇವರ್ ಫಿನಿಶ್ ಮಾಡಿದ್ದೀರಾ?. ನಿಮಗೆ ಸ್ವಲ್ಪವಾದರೂ ಕಾಮನ್ ಸೆನ್ಸ್, ಮನುಷ್ಯತ್ವ ಇದೆಯಾ? ಕಾಂಗ್ರೆಸ್ ಕಾರ್ಯಕರ್ತ, ಬಿಜೆಪಿ ಕಾರ್ಯಕರ್ತ ಅಂತ ಹೇಳುತ್ತೀರಾ? ಎಂದಿದ್ದಾರೆ.

ಅಂಬಾಗಿಲು - ಕಲ್ಸಂಕ ರಸ್ತೆಯಲ್ಲಿ ಗುಂಡಿ ಎಲ್ಲಿದೆ?, ಮ್ಯಾನ್ ಹೋಲ್ ಎಲ್ಲಿದೆ? ಎಂದೇ ತಿಳಿಯುವುದಿಲ್ಲ. ಮಂಗಳೂರಿನಲ್ಲಿ ಪ್ರಧಾನಮಂತ್ರಿ ಬರ್ತಾರೆ ಅಂತಾದರೂ ರಸ್ತೆ ಸರಿ ಆಗುತ್ತಿದೆ. ನಿಮ್ಮ ಕಿಸೆಯ ಹಣದಿಂದ ರಸ್ತೆ ಸರಿ ಮಾಡುವುದು ಬೇಡ. ನಾವು ತೆರಿಗೆ ಕಟ್ಟುತ್ತಿದ್ದೇವೆ, ಅದೇ ತೆರಿಗೆಯಿಂದ ಒಳ್ಳೆ ರಸ್ತೆ ಮಾಡಿ ಕೊಡಿ. ಈ ರಸ್ತೆಯಲ್ಲಿ ಹೋಗಿ ಸಾಕಾಗಿದೆ ಎಂದು ಮನವಿ ಮಾಡಿಕೊಂಡಿದ್ದಾರೆ.

Edited By : Shivu K
Kshetra Samachara

Kshetra Samachara

27/08/2022 05:38 pm

Cinque Terre

6.81 K

Cinque Terre

3

ಸಂಬಂಧಿತ ಸುದ್ದಿ