ಸುಳ್ಯ: ಭೂಕಂಪನ, ಮಳೆ ಹಾನಿ, ಬೆಂಕಿ ಅವಘಡ ಸಂಭವಿಸಿ ಕೋಟ್ಯಾಂತರ ರೂ ನಷ್ಟ ಸಂಭವಿಸಿದರೂ ಸಂತಸ್ತೃರಿಗೆ ನಯಾಪೈಸೆ ಪರಿಹಾರ ನೀಡಿಲ್ಲ. ಜನಪ್ರತಿನಿಧಿಗಳು, ಸಚಿವರು, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಆಶ್ವಾಸನೆ ಕೊಟ್ಟು ವರ್ಷಗಳೇ ಕಳೆದಿವೆ ಎಂದು ಕೆಪಿಸಿಸಿ ಮಾಜಿ ಕಾರ್ಯದರ್ಶಿ ಟಿ.ಎಂ.ಶಾಹೀದ್ ತೆಕ್ಕಿಲ್ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರಾಕೃತಿಕ ವಿಕೋಪ, ಭೂಕಂಪನ, ಜಲಪ್ರಳಯದಿಂದ ಮನೆ, ಅಂಗಡಿ, ಕೃಷಿ, ರಸ್ತೆ, ಸೇತುವೆ ಸೇರಿ ಕೋಟ್ಯಾಂತರ ರೂಗಳ ನಷ್ಟವಾಗಿದೆ.
3 ದಿನಗಳಿಂದ ಸುರಿದ ಮಳೆಗೆ ಇಡೀ ಸಂಪಾಜೆ ಮುಳುಗಿದೆ. ಆದರೆ ಸರಕಾರದಿಂದ ಯಾವುದೇ ಸ್ಪಂದನೆಯಿಲ್ಲ. ಎಲ್ಲಾ ಅಧಿಕಾರಿಗಳು ಗ್ರಾಮಕ್ಕೆ ಬಂದರೂ ಜನರಿಗೆ ಯಾವುದೇ ಪ್ರಯೋಜನ ಆಗಿಲ್ಲ. ಗ್ರಾ.ಪಂ.ಸದಸ್ಯ ಅಬೂಸಾಲಿ ಅವರ ಮನೆ ಬಿರುಕು ಬಿಟ್ಟು ಅವರು ಮನೆಯನ್ನೇ ಬಿಡಬೇಕಾಗಿ ಬಂದಿದೆ. ಕೋಟ್ಯಾಂತರ ರೂ ನಷ್ಟ ಆಗಿದ್ದು 10 ಕೋಟಿ ರೂ ವಿಶೇಷ ಪ್ಯಾಕೇಜ್ ನೀಡಬೇಕು. ಒಂದು ಕೋಟಿ ತುರ್ತು ಪರಿಹಾರ ನೀಡಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಗ್ರಾ.ಪಂ.ಸದಸ್ಯ ಒತ್ತಾಯಿಸಿದ್ದಾರೆ.
Kshetra Samachara
04/08/2022 05:49 pm