ಉಡುಪಿ: ರಾಜ್ಯದಲ್ಲಿ ನೆರೆ ಮತ್ತು ಮಳೆ ಹಾನಿಯಿಂದಾದ ನಷ್ಟಕ್ಕೆ ತಕ್ಷಣ ಮೊದಲ ಹಂತದಲ್ಲಿ 500 ಕೋಟಿ ಬಿಡುಗಡೆ ಮಾಡುತ್ತೇನೆ ಎಂದು ಉಡುಪಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಮಣಿಪಾಲದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಘೋಷಣೆ ಮಾಡಿದ್ದಾರೆ. ಕರಾವಳಿಯಲ್ಲಿ ಬಾರೀ ಮಳೆಯಿಂದಾಗಿ ಎಂಟು ಜೀವ ಹಾನಿಯಾಗಿದೆ.ಸುಮಾರು 355 ಹೆಕ್ಟೇರ್ ತೋಟ, ಬೆಳೆ ನಾಶವಾಗಿದೆ.
ಮೂರು ಜಿಲ್ಲೆಯಲ್ಲಿ 1062 ಮನೆಗಳಿಗೆ ಹಾನಿಯಾಗಿದೆ. ಕರಾವಳಿಯಲ್ಲಿ 2187 ಮೀ. ರಸ್ತೆಗೆ ಹಾನಿಯಾಗಿದೆ.5000 ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಬಿದ್ದಿವೆ ಎಂದು ಮಾಹಿತಿ ನೀಡಿದರು.
ದ.ಕ ,ಉಡುಪಿ, ಉ.ಕ ದಲ್ಲಿ 168 ಸೇತುವೆಗಳಿಗೆ ಹಾನಿಯಾಗಿದೆ.
ಇನ್ನು ಭೂಕಂಪನ, ಭೂಕುಸಿತ ಆದ ಬಗ್ಗೆ ಅಮೃತ ವಿವಿಯವರು ಅಧ್ಯಯನ ಮಾಡುತ್ತಾರೆ.
ವರದಿ ಬಂದ ಕೂಡಲೇ ಪರಿಹಾರಕ್ಕೆ ಸರಕಾರ ಸಿದ್ಧವಿದೆ.ಕಡಲ್ಕೊರೆತಕ್ಕೆ ಎಡಿಬಿ ಮೂಲಕ 300 ಕೋಟಿ ಖರ್ಚಾಗಿದೆ.ಕೇರಳ ಮಾದರಿಯಲ್ಲಿ ಪ್ರಾಯೋಗಿಕವಾಗಿ ಒಂದು ಕಿಲೋಮೀಟರ್ ಕಡಲಿಗೆ ತಡೆಗೋಡೆ ನಿರ್ಮಾಣ ಮಾಡಲಿದ್ದೇವೆ.ಇದಕ್ಕೆ ಉನ್ನತ ಮಟ್ಟದ ಸಮಿತಿ ರಚನೆ ಮಾಡಲಾಗುವುದು.ಸರಿಯಾದ ಅಧ್ಯಯನ ಮಾಡಿ ಅನುಷ್ಟಾನ ಮಾಡಲು ತೀರ್ಮಾನ ಮಾಡಲಾಗುವುದು.
ಜೊತೆಗೆ ಶಾಶ್ವತ ಪರಿಹಾರಕ್ಕೆ ಎಲ್ಲ ಕ್ರಮ ಕೈಗೊಳ್ಳಲಾಗುವುದು.ಬೆಳಗಾವಿ, ಉತ್ತರ ಕರ್ನಾಟಕ, ಉ.ಕ ಜಿಲ್ಲೆಗೆ ಮುಂದಿನ ವಾರ ಪ್ರವಾಸ ಮಾಡಲಿದ್ದೇನೆ ಎಂದರು.
PublicNext
13/07/2022 05:28 pm