ಮಂಗಳೂರು: ದ.ಕ ಜಿಲ್ಲೆಯನ್ನು ನೆರೆಪೀಡಿತ ಪ್ರದೇಶವೆಂದು ಸರಕಾರ ತಕ್ಷಣ ಘೋಷಣೆ ಮಾಡಬೇಕು. ಹಾಗೂ ನೆರೆ ಪರಿಹಾರ ರೂಪವಾಗಿ ವಿಶೇಷ ಅನುದಾನ ನೀಡಬೇಕು ಎಂದು ಎಐಸಿಸಿ ಕಾರ್ಯದರ್ಶಿ ಐವನ್ ಡಿಸೋಜ ಒತ್ತಾಯಿಸಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಕಳೆದ 10ದಿನಗಳಿಂದ ದ.ಕ ಜಿಲ್ಲೆಯಲ್ಲಿ ಸತತವಾಗಿ ಮಳೆ ಸುರಿಯುತ್ತಿದ್ದು, 420 ಮನೆಗಳು ಭಾಗಶಃ ಕುಸಿದಿದೆ. ಸುಮಾರು 56 ಮನೆಗಳು ಸಂಪೂರ್ಣ ಕುಸಿದಿದೆ. ಕುಸಿತಗೊಂಡ ಮನೆಗಳಿಗೆ ಜಿಲ್ಲಾಡಳಿತ 90 ಸಾವಿರ ರೂ. ಪರಿಹಾರ ನೀಡುವುದಾಗಿ ಜಿಲ್ಲಾಡಳಿತ ಹೇಳಿದೆ. ಆದರೆ ಯಾವಾಗ ಕೊಡಲಾಗುತ್ತದೆ ಎಂದು ಇನ್ನೂ ಸ್ಪಷ್ಟ ಪಡಿಸಿಲ್ಲ. ಎರಡು ಮೂರು ವರ್ಷಗಳ ಬಳಿಕ ಪರಿಹಾರ ನೀಡಿದರೆ ಯಾರಿಗೆ ಪ್ರಯೋಜನವಾದೀತು. ಕಳೆದ ಬಾರಿ ಮಳೆ ಹಾನಿಗೊಳಗಾದವರಿಗೆ ಕೊರೊನಾ ಕಾರಣ ಹೇಳಿ ಇಂದಿನವರೆಗೂ ಸರಕಾರ ಪರಿಹಾರ ನೀಡಿಲ್ಲ ಎಂದು ಹೇಳಿದರು.
ಆರ್. ಅಶೋಕ್ ಅವರು ಮೊನ್ನೆ ಬಂದು ಪರಿಶೀಲನೆ ನಡೆಸಿ ಜಿಲ್ಲೆಗೆ 5 ಕೋಟಿ ರೂ. ಪರಿಹಾರ ನೀಡುತ್ತೇವೆ ಎಂದಿದ್ದಾರೆ. ಆದರೆ ಈ ಹಣ ಎಲ್ಲಿಗೆ ಸಾಕಾಗುತ್ತದೆ. ಸರಕಾರದ ಬಳಿ ಇಂದು ದುಡ್ಡಿಲ್ಲ. ಅವರಲ್ಲಿ ದುಡ್ಡಿದೆ ಎಂದಾದರೆ ಸರಕಾರದಲ್ಲಿ ಎಷ್ಟು ದುಡ್ಡಿದೆ ಹಾಗೆಯೇ ಎಷ್ಟು ಖರ್ಚು ಆಗಿದೆ ಎಂಬುದರ ಲೆಕ್ಕಾಚಾರದ ಬಗ್ಗೆ ಸರಕಾರ ಶ್ವೇತಪತ್ರ ಹೊರಡಿಸಲಿ ಎಂದು ಐವನ್ ಡಿಸೋಜ ಆಗ್ರಹಿಸಿದರು.
Kshetra Samachara
11/07/2022 03:00 pm