ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಟ್ವಾಳದಲ್ಲಿ ಹಿಂದುಳಿದ ವರ್ಗಗಳ ಸಮಾವೇಶ

ಬಿಸಿರೋಡ್: ಬಂಟ್ವಾಳ ಬ್ಲಾಕ್ ಕಾಂಗ್ರೆಸ್, ಹಿಂದುಳಿದ ವರ್ಗ ಘಟಕ ಹಾಗೂ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವರ್ಗ ಘಟಕಗಳ ವತಿಯಿಂದ ಹಿಂದುಳಿದ ವರ್ಗಗಳ ಸಮಾವೇಶ ಭಾನುವಾರ ಸಂಜೆ ಬಿಸಿರೋಡ್ ಶ್ರೀ ಬ್ರಹ್ಮನಾರಾಯಣ ಗುರು ಸಭಾ ಭವನದ ಹಾಲ್ ನಲ್ಲಿ ನಡೆಯಿತು.

ಕೆಪಿಸಿಸಿ ಸಮಿತಿ ಉಪಾಧ್ಯಕ್ಷ ಮದುಬಂಗಾರಪ್ಪ ಸಮಾವೇಶ ಉದ್ಘಾಟಿಸಿದರು. ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ವಿಶ್ವಾಸ್ ದಾಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ರಮಾನಥ ರೈಉಳುವವನೆ ಹೊಲದೊಡೆಯ ಕಾನೂನಿನಲ್ಲಿ ಅತ್ಯಂತ ಹೆಚ್ಚು ಭೂಮಿ ಪಡೆದುಕೊಂಡವರಿದ್ದರೆ ಅದು ಹಿಂದುಳಿದ ವರ್ಗಗಳ ಜನತೆ ಎಂದು ಅವರು ಹೇಳಿದರು.

ಋಣಪರಿಹಾರ ಕಾಯ್ದೆಯನ್ನು ಜಾರಿ ಮಾಡಿದ್ದು ಕಾಂಗ್ರೆಸ್ ಪಕ್ಷ ಎಂದು ಅವರು ಹೇಳಿದರು. ಜೀತ ಪದ್ದತಿಯನ್ನು ರದ್ದತಿ ಮಾಡಿ, ಬಡವರಿಗೆ ಬದುಕು ನೀಡಿದ್ದು ಕಾಂಗ್ರೆಸ್ ಪಕ್ಷ.

ಧರ್ಮ ದೇವರ ಹೆಸರಿನಲ್ಲಿ ಮೋಸ ಮಾಡುತ್ತಿದ್ದಾರೆ, ಭಾವನಾತ್ಮಕ ವಿಚಾರದ ಮೂಲಕ ಮನುಷ್ಯ ಮನುಷ್ಯರ ನಡುವೆ ದ್ವೇಷ ಉಂಟಾಗಿಸಿ ಗಲಾಟೆ ಮಾಡುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ.

ಇಷ್ಟೆಲ್ಲಾ ಸವಲತ್ತುಗಳನ್ನು ನೀಡಿದ ಕಾಂಗ್ರೆಸ್ ಪಕ್ಷದ ಋಣ ನಮ್ಮ ಮೇಲಿದ್ದು, ಅದನ್ನು ತೀರಿಸುವ ಕೆಲಸ ಆಗಬೇಕಾಗಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಪ್ರಥಮವಾಗಿ ಹಿಂದುಳಿದ ವರ್ಗಗಳ ಸಮಾವೇಶ ಆಯೋಜಿಸಿದ್ದು, ಪ್ರತಿ ತಾಲೂಕಿನಲ್ಲಿ ಮಾಡುವಂತೆ ಹೈ ಕಮಾಂಡ್ ಸೂಚಿಸಿದೆ ಎಂದರು. ಶಿಕ್ಷಣ ದಲ್ಲೂ ಕೇಸರಿಕರಣ ಮಾಡಿದ ಕೀರ್ತಿ ಬಿಜೆಪಿಯವರಿಗೆ ಸಲ್ಲುತ್ತದೆ ಎಂದು ವ್ಯಂಗ್ಯವಾಡಿದ್ರು.

ಕೆ.ಪಿ.ಸಿ.ಸಿ.ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ , ಮಾಜಿ ಕೆ.ಪಿ.ಸಿ.ಸಿ. ಮಾಜಿ ಸದಸ್ಯ ಪೃಥ್ವಿರಾಜ್ ಅರ್.ಕೆ. ಹಿಂದುಳಿದ ವರ್ಗಗಳ ರಾಜ್ಯ ಸಮಿತಿ ಸದಸ್ಯ ಗಣೇಶ್ ಪೂಜಾರಿ, ಮುಖ್ಯ ಕಾರ್ಯದರ್ಶಿ ಮಲ್ಲಿಕಾ ಪಕಳ, ಪಿಯೂಸ್ ರೊಡ್ರಿಗಸ್, ಪುರಸಭೆ ಅಧ್ಯಕ್ಷ ಮಹಮ್ಮದ್ ಶರೀಫ್, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Edited By :
PublicNext

PublicNext

05/07/2022 11:05 am

Cinque Terre

78.47 K

Cinque Terre

0

ಸಂಬಂಧಿತ ಸುದ್ದಿ