ಮಂಗಳೂರು: ಪೌರ ಕಾರ್ಮಿಕರ ಪ್ರತಿಭಟನೆ ಇಂದು ನಾಲ್ಕನೆ ದಿನಕ್ಕೆ ಕಾಲಿಟ್ಟಿದೆ.ವಿವಿಧ ಬೇಡಿಕೆಗಳನ್ನು ಮುಂದಿಟ್ಟು ರಾಜ್ಯಾದ್ಯಂತ ಪ್ರತಿಭಟನೆ ನಡೆಯುತ್ತಿದೆ.ಸರಿಯಾಗಿ ಕಸ ವಿಲೇವಾರಿಯಾಗದೆ ನಗರದ ಎಲ್ಲೆಡೆ ತ್ಯಾಜ್ಯ ರಾಶಿ ಕಂಡಬರುತ್ತಿದೆ.ನಮ್ಮ ಕುಡ್ಲ ನಾಲ್ಕು ದಿನಗಳಿಂದ ಗಬ್ಬು ನಾರುತ್ತಿದೆ.ಅದ್ರೆ ಇಲ್ಲೊಬ್ರು ಕಾರ್ಪೊರೇಟರ್ ತಾನೇ ಸ್ವತಃ ವಾಹನ ಚಲಾಯಿಸಿ ಮನೆ
ಮನೆ ಕಸ ಸಂಗ್ರಹ ಮಾಡಿದ್ದಾರೆ. ಹೌದು ಪದವು ಸೆಂಟ್ರಲ್ ವಾಡ್೯ ನ ಕಾರ್ಪೊರೇಟರ್ ಕಿಶೋರ್ ಕೊಟ್ಟಾರಿ,ಪೌರ ಕಾರ್ಮಿಕರ ಮುಷ್ಕರ ನಡುವೆ ತನ್ನ ವಾಡ್೯ನ ತ್ಯಾಜ್ಯ ಸಂಗ್ರಹಿಸಿ ಒಬ್ಬ ಉತ್ತಮ ಜನಪ್ರತಿನಿಧಿಯಾಗಿ ಕಾರ್ಯ ನಿರ್ವಹಿಸುವ ಮೂಲಕ ಎಲ್ಲಾ ಮೆಚ್ಚುಗೆ ಗಳಿಸಿದ್ರು.
Kshetra Samachara
04/07/2022 09:16 pm