ಮಣಿಪಾಲ: ಪರ್ಕಳ - ಕೊಡಂಗೆ ರಸ್ತೆಯ ಅಸಮರ್ಪಕ ಕಾಮಗಾರಿ ಮತ್ತು ಕೆಸರುಮಯ ರಸ್ತೆ ವಿರುದ್ಧ ಇವತ್ತು ಸ್ಥಳೀಯ ಸಾರ್ವಜನಿಕರು ಪ್ರತಿಭಟನೆ ನಡೆಸಿದರು.ಗ್ರಾಮದ ಸಮಾನಮನಸ್ಕರು ಸೇರಿ ಪಾದಯಾತ್ರೆ ನಡೆಸಿ ಬಳಿಕ ತಮ್ಮ ಪ್ರತಿಭಟನೆ ದಾಖಲಿಸಿದರು. ಮುಖ್ಯವಾಗಿ ಇದು ಉಡುಪಿ ನಗರಸಭೆ ಅಧ್ಯಕ್ಷೆಯ ವಾರ್ಡ್ ಎಂಬುದು ಗಮನಾರ್ಹ.ಕಳೆದೆರಡು ತಿಂಗಳಿನಿಂದ ಇಲ್ಲಿನ ರಸ್ತೆ ಮಳೆಯಿಂದಾಗಿ ಸಂಚಾರಕ್ಕೆ ಅಯೋಗ್ಯ ಎನಿಸಿದೆ.ನಿತ್ಯ ಪರದಾಡುವ ಸಾರ್ವಜನಿಕರು ಇವತ್ತು ನಗರಸಭೆ ಅಧ್ಯಕ್ಷೆ ಗಮನ ಸೆಳೆಯಲು ಬೀದಿಗಿಳುದರು.
ಇಲ್ಲಿದ್ದ ಹಳೇ ಡಾಮಾರು ರಸ್ತೆಯನ್ನು ಕೆಡವಿ ಸುಮಾರು ಮುಕ್ಕಾಲು ಕಿಲೋಮೀಟರ್ ರಸ್ತೆಯನ್ನು ಸಂಪೂರ್ಣ ಹಾಳು ಮಾಡಿ ಎರಡು ತಿಂಗಳು ಕಳೆದರೂ ಕಾಮಗಾರಿಗೆ ಯಾವುದೇ ರೂಪರೇಷೆ ನೀಡದ ನಗರಸಭೆ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.ನಿನ್ನೆ ಹೃದಯಾಘಾತದಿಂದ ಸ್ಥಳೀಯರೊಬ್ಬರು ನಿಧಾನರಾಗಿ ಅವರ ಶವ ರವಾನಿಸುಲೂ ತೊಂದರೆ ಆಗಿತ್ತು.ಇಷ್ಟೇ ಅಲ್ಲದೆ ಸ್ಥಳೀಯರ ಬಾವಿಯಲ್ಲಿ ರಸ್ತೆಯ ಕೊಳಕು ನೀರು ತುಂಬಿದೆ. ಇವೆಲ್ಲದರಿಂದ ತಾಳ್ಮೆ ಕಳೆದುಕೊಂಡ ಸ್ಥಳೀಯರು ಪ್ರತಿಭಟನೆ ಮೂಲಕ ತಮ್ಮ ಆಕ್ರೋಶ ಹೊರಹಾಕಿದರು.
Kshetra Samachara
02/07/2022 10:11 pm