ಉಡುಪಿ: ಮಣಿಪಾಲ ಅಂಬಾಗಿಲು ಚತುಷ್ಪಥ ರಸ್ತೆ ನಿರ್ಮಾಣವಾಗಿ ಕೇವಲ ಮೂರ್ನಾಲ್ಕು ವರ್ಷ ಆಗಿದೆ ಅಷ್ಟೆ. ಇಷ್ಟರಲ್ಲೇ ಚತುಷ್ಪಥದ ಡಿವೈಡರ್ ಕೆಡವುವ ಕಾಮಗಾರಿ ಪ್ರಾರಂಭಗೊಂಡಿದೆ. ಇದು ತೆರಿಗೆ ಹಣದ ಪೋಲು ಎಂದು ಜನರೂ ಆಕ್ರೋಶ ವ್ಯಕ್ತಪಡಿಸಿದ್ದು, ಪಬ್ಲಿಕ್ ನೆಕ್ಸ್ಟ್ ಈ ಕುರಿತು ವಿಸ್ತೃತ ವರದಿ ಪ್ರಕಟಿಸಿತ್ತು.
ಇದೀಗ ಪಬ್ಲಿಕ್ ನೆಕ್ಸ್ಟ್‌ಗೆ ಪ್ರತಿಕ್ರಿಯೆ ನೀಡಿರುವ ಉಡುಪಿ ಶಾಸಕ ರಘುಪತಿ ಭಟ್, ಈ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚುತ್ತಿದೆ. ಈಗ ಡಿವೈಡರ್ ಮೂರ್ನಾಲ್ಕು ಮೀಟರ್‌ನಷ್ಟು ಅಗಲ ಇದೆ. ಇಷ್ಟು ಅಗಲದ ಅಗತ್ಯ ಇಲ್ಲ. ಹೀಗಾಗಿ ಇದನ್ನು ಒಡೆದು ಒಂದು ಮೀಟರ್ ಡಿವೈಡರ್ ನಿರ್ಮಾಣ ಮಾಡುತ್ತೇವೆ. ಆಗ ರಸ್ತೆ ಅಗಲವಾಗಿ ಸಂಚಾರಕ್ಕೆ ಅನುಕೂಲವಾಗುತ್ತದೆ ಎಂದು ಹೇಳಿದ್ದಾರೆ. ಇದನ್ನು ಮೊದಲೇ ಮಾಡಬಹುದಿತ್ತಲ್ಲವೆ? ಜನರ ತೆರಿಗೆ ದುಡ್ಡು ಪೋಲಾಗುವುದಿಲ್ಲವೆ ಎಂದು ಕೇಳಿದರೆ, ಹಿಂದೆ ಮಾಡಿದ್ದು ತಪ್ಪಾಗಿದೆ. ಈಗ ಡಿವೈಡರ್ ಸಣ್ಣದು ಮಾಡುವುದು ಅನಿವಾರ್ಯ ಎಂದು ಹೇಳಿದ್ದಾರೆ.
Kshetra Samachara
04/05/2022 01:33 pm