ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: 'ರಾಜ್ಯಾದ್ಯಂತ 1000 ವಿದ್ಯುತ್ ಚಾರ್ಜಿಂಗ್ ಸೆಂಟರ್'

ಉಡುಪಿ: ದ್ವಿಚಕ್ರ ಮತ್ತು ನಾಲ್ಕು ಚಕ್ರದ ಎಲೆಕ್ಟ್ರಿಕ್ ವಾಹನಗಳು ಸಾಕಷ್ಟು ಬರುತ್ತಿರುವುದರಿಂದ ರಾಜ್ಯಾದ್ಯಂತ 1000 ವಿದ್ಯುತ್ ಚಾರ್ಜಿಂಗ್ ಸೆಂಟರ್ ಆರಂಭಿಸಲಾಗುವುದು ಎಂದು ಇಂಧನ ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ.

ಉಡುಪಿಯಲ್ಲಿ ಮಾತನಾಡಿದ ಅವರು, ರಾಜ್ಯಾದ್ಯಂತ ಚಾರ್ಜಿಂಗ್ ಸೆಂಟರ್‌ಗಳನ್ನು ಸ್ಥಾಪನೆ ಮಾಡುತ್ತಿದ್ದೇವೆ. ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಚಾರ್ಜಿಂಗ್ ಸೆಂಟರ್‌ಗಳನ್ನು ಶುರು ಮಾಡುತ್ತೇವೆ ಎಂದರು.

ಇನ್ನು ರಾಜ್ಯ ಇಂಧನ ಇಲಾಖೆಯಿಂದ ಹೊಸ ಅಭಿಯಾನವನ್ನು ಆರಂಭ ಮಾಡುತ್ತಿದ್ದೇವೆ ಎಂದ ಅವರು , ಮೇ 5ರಿಂದ 15ರ ವರೆಗೆ ಅಭಿಯಾನ ರಾಜ್ಯಾದ್ಯಂತ ನಡೆಯುತ್ತದೆ. ಹತ್ತು ದಿನಗಳ ಕಾಲ ಎಲ್ಲಾ ಟ್ರಾನ್ಸ್ಫಾರ್ಮರ್‌ಗಳ ನಿರ್ವಹಣೆಗೆ ಸೂಚನೆ ನೀಡಲಾಗಿದೆ. ಲೈನ್ ಮ್ಯಾನ್‌ನಿಂದ ಹಿರಿಯ ಅಧಿಕಾರಿ ತನಕ ಎಲ್ಲರೂ ಟ್ರಾನ್ಸ್ಫಾರ್ಮರ್ ನಿರ್ವಹಣೆ ಕಡೆ ಗಮನ ಕೊಡುತ್ತಾರೆ. ಟ್ರಾನ್ಸ್ಫಾರ್ಮರ್‌ಗಳ ನಿರ್ವಹಣೆ ಸಮಸ್ಯೆಯಾಗಿ ಕೆಲವು ಕಡೆಗಳಲ್ಲಿ ಟಿಸಿ ಬ್ಲಾಸ್ಟ್ ಆಗಿ ಪ್ರಾಣಹಾನಿಯಾಗಿದೆ. ಈ ಬಗ್ಗೆ ಎಲ್ಲಾ ರೀತಿಯ ಪೂರ್ವಭಾವಿ ಸಭೆಗಳನ್ನು ನಾವು ನಡೆಸಿದ್ದೇವೆ. ಹೆಚ್ಚುವರಿ ಲೋಡು, ಅರ್ಥಿಂಗ್ ಆಯಿಲ್ ಕೊರತೆ ಮುಂತಾದ ಎಲ್ಲ ತಪಾಸಣೆ ನಡೆಸಲಾಗುವುದು. ಅಪಾಯದ ಸ್ಥಿತಿಯಲ್ಲಿರುವ ಟಿಸಿಗಳನ್ನು ತಕ್ಷಣ ಬದಲಾಯಿಸುವ ವ್ಯವಸ್ಥೆ ಮಾಡುತ್ತೇವೆ ಎಂದು ಮಾಹಿತಿ ನೀಡಿದರು.

ಸ್ಲಗ್: ಮೇ 5ರಿಂದ ಟ್ರಾನ್ಸ್ಫಾರ್ಮರ್‌ಗಳ ನಿರ್ವಹಣೆ ಅಭಿಯಾನ

Edited By : Nagesh Gaonkar
PublicNext

PublicNext

02/05/2022 03:35 pm

Cinque Terre

34.81 K

Cinque Terre

0

ಸಂಬಂಧಿತ ಸುದ್ದಿ