ಸುಳ್ಯ: ಆಮ್ ಆದ್ಮಿ ಪಾರ್ಟಿ ದ.ಕ.ಜಿಲ್ಲಾಧ್ಯಕ್ಷ ಸಂತೋಷ್ ಕಾಮತ್ ಶುಕ್ರವಾರ ಸುಳ್ಯ ತಾಲೂಕು ಪ್ರವಾಸ ಕೈಗೊಂಡರು.ಈ ಸಂದರ್ಭ ತಾಲೂಕಿನ ವಿವಿಧ ಗಣ್ಯರನ್ನು ಹಾಗೂ ಪಕ್ಷದ ಕಾರ್ಯಕರ್ತರನ್ನು ಅವರು ಭೇಟಿಯಾದರು.
ರಾಜ್ಯದಲ್ಲಿಯೇ ನಂಬರ್ ವನ್ ಎನಿಸಿಕೊಂಡ ಆದರ್ಶ ಗ್ರಾಮ ಬಳ್ಪಕ್ಕೆ ಭೇಟಿ ನೀಡಿ ಬೋಗಾಯನಕೆರೆ ಅಭಿವೃದ್ಧಿ ಕಾಮಗಾರಿ
ವೀಕ್ಷಣೆ ಮಾಡಿದರು. ಬಳಿಕ ಮಾತನಾಡಿದ ಸಂತೋಷ್ ಕಾಮತ್ ಅವರು ಬಳ್ಪವು ಆದರ್ಶ ಗ್ರಾಮದಲ್ಲಿ ನಂಬರ್ ವನ್ ಎಂದು ಗುರುತಿಸಿಕೊಂಡಿದೆ. ಇಲ್ಲಿನ ಇತಿಹಾಸ ಪ್ರಸಿದ್ಧ ಬೋಗಾಯನಕೆರೆ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಉತ್ತಮ ಯೋಜನೆ, ಆದರೆ ಇಲ್ಲಿನ ಕಾಮಗಾರಿ ಬಗ್ಗೆ ಅಸಮಾಧಾನವಿದೆ.ಕಾಮಗಾರಿ ಅವೈಜ್ಞಾನಿಕವಾಗಿ ನಡೆಸಲಾಗುತ್ತಿದೆ ಎಂದು ಭಾಸವಾಗುತಿದೆ. ಆದರ್ಶ ಗ್ರಾಮದ ಕೆಲಸಗಳು ಅಚ್ಚುಕಟ್ಟಾಗಿ ನಡೆಯಬೇಕಿತ್ತು. ನಂಬರ್ ವನ್ ಎಂದು ಗುರುತಿಸಿಕೊಂಡಿದೆ ಕೂಡಾ. ಆದರೆ ಈ ಕಾಮಗಾರಿ ಸಮರ್ಪಕವಾಗಿ ನಡೆದಿಲ್ಲ ಎಂದು ಆರೋಪಿಸಿದರು. ಕಾಮಗಾರಿ ನಡೆದ ಕೆಲವು ಕಡೆ ಮತ್ತೆ ಕುಸಿತವಾಗಿದೆ. ಅವಶ್ಯಕತೆ ಇಲ್ಲದೆಯೇ ಖರ್ಚಾಗುತ್ತಿದೆಯೇ ಎಂದು ಭಾಸವಾಗುತ್ತಿದೆ. ಜಿಲ್ಲೆಯ ಹಲವು ಕಡೆ ಇಂತಹ ಕೆಲಸ ಇದೆ. ಸರ್ಕಾದ ಇದನ್ನು ಗಂಭೀರವಾಗಿ ಪರಿಗಣಿಸಿಬೇಕು. ಜನರು ಮಾತನಾಡುದವ ಸ್ಥಿತಿಯಲ್ಲಿಲ್ಲ. ಈ ರೀತಿ ಅವೈಜ್ಞಾನಿಕ ಕಾಮಗಾರಿ ನಡೆದರೆ ಆಮ್ ಆದ್ಮಿ ಪಕ್ಷ ಜನರ ಜೊತೆ ನಿಂತು ಹೋರಾಟ ನಡೆಸಲಿದೆ ಎಂದು ಹೇಳಿದರು.
ಸುಳ್ಯ ತಾಲೂಕಿನಲ್ಲಿ ಪಕ್ಷ ಸಂಘಟನೆ ಹಾಗೂ ಜನರ ಜೊತೆ, ಸಮಾಜದ ಗಣ್ಯರ ಜೊತೆ ಮಾತುಕತೆ ನಡೆಸಿ ಪಕ್ಷ ಬೆಳೆಯಬೇಕಾದ ಹೆಜ್ಜೆಗಳ ಬಗ್ಗೆ ಮಾಹಿತಿ ಸಂಗ್ರಹ ಮಾಡುತ್ತಿದ್ದೇವೆ. ದೇಶದ ಬಗ್ಗೆ ಕಾಳಜಿಯನ್ನು ಹೊಂದಿ ಕೆಲಸ ಮಾಡಲಾಗುತ್ತಿದೆ. ಗ್ರಾಮೀಣ ಭಾಗಗಳೂ ಬೆಳೆಯಬೇಕು, ಅಭಿವೃದ್ಧಿ ಹೊಂದಬೇಕು. ಜನರ ತೆರಿಗೆ ಹಣ ಸರಿಯಾಗಿ ವಿನಿಯೋಗವಾಗಬೇಕು. ಎಂಬುದು ನಮ್ಮ ಗುರಿಯಾಗಿದೆ ಎಂದು ಸಂತೋಷ್ ಕಾಮತ್ ಹೇಳಿದರು.
ಇದೇ ಸಂದರ್ಭ ಈಚೆಗೆ ಪಕ್ಷ ಸೇರ್ಪಡೆಯಾದ ಪ್ರಸನ್ನ ಎಣ್ಮೂರು ಅವರ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದರು. ವಿವಿಧ ಗಣ್ಯರನ್ನು ಭೇಟಿ ಮಾಡಿದರು. ಸುಳ್ಯದಲ್ಲಿ ಕಾರ್ಯಕರ್ತರೊಂದಿಗೆ ಮಾತುಕತೆ ನಡೆಸಿದರು.
ಈ ಸಂದರ್ಭ ಎಎಪಿ ಉಡುಪಿ-ದಕ ಜಿಲ್ಲಾ ವೀಕ್ಷಕ ಅಶೋಕ್ ಎಡಮಲೆ, ಜಿಲ್ಲಾ ಮುಖಂಡರುಗಳಾದ ಅರವಿಂದ್ ಡಿಸೋಜಾ, ಜೆ ಪಿ ರಾವ್ , ವೇಣುಗೋಪಾಲ್, ಪ್ರಸನ್ನ ಭಟ್ ಎಣ್ಮೂರು ಹಾಗೂ ಎಎಪಿ ತಾಲೂಕು ಕಾರ್ಯದರ್ಶಿ ಗಣೇಶ್ ಪ್ರಸಾದ್ ಕಂದಡ್ಕ, ಪ್ರಮುಖರಾದ ಚೇತನ್ ದೇವಸ್ಯ, ಕಡಬ, ಮೋಹನ್ ದಾಸ ಎಣ್ಣೆಮಜಲು, ಕರುಣಾಕರ ಎಣ್ಣೆಮಜಲು, ಸುಮನಾ ಬೆಳ್ಳಾರ್ಕರ್, ರಾಮಕೃಷ್ಣ ಬೀರಮಂಗಿಲ, ದೀಕ್ಷಿತ್ ಕುಮಾರ್ ಜಯನಗರ, ಕಲಂದರ್ ಎಲಿಮಲೆ, ಸುಂದರ ಕುದ್ಪಾಜೆ, ದೀಪಕ್ ಶೆಣೈ ಉಪಸ್ಥಿತರಿದ್ದರು ಉಪಸ್ಥಿತರಿದ್ದರು. ಸುಳ್ಯ ವಿಧಾನಸಭಾ ಕ್ಷೇತ್ರದ ಸಂಘಟನೆ ಚಟುವಟಿಕೆಗಳ ಬಗ್ಗೆ ಜಿಲ್ಲಾ ಅಧ್ಯಕ್ಷರೊಂದಿಗೆ ಚರ್ಚೆಯಲ್ಲಿ ಭಾಗವಹಿಸಿದ್ದರು.
Kshetra Samachara
30/04/2022 10:36 pm