ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ: ಆಹೋರಾತ್ರಿ ಧರಣಿ: ಅರಣ್ಯ ಸಂರಕ್ಷಣಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಪ್ರತಿಭಟನಕಾರರು!

ಕುಂದಾಪುರ: ಪರಿಶಿಷ್ಟ ಪಂಗಡದ ಹಣ ದುರುಪಯೋಗ ಆಗಿದೆ ಎಂದು ಆರೋಪಿಸಿ ನಡೆಯುತ್ತಿರುವ ಧರಣಿ ಆಹೋರಾತ್ರಿ ನಡೆದಿದೆ.ಉಡುಪಿ ಜಿಲ್ಲಾ ಅರ್ ಟಿ ಐ ಕಾರ್ಯಕರ್ತರು ಹಾಗೂ ದಲಿತ ಸಂಘರ್ಷ ಸಮಿತಿ ಭೀಮಾವಾದ ಕಾರ್ಯಕರ್ತರು ಈ ಧರಣಿ ನಡೆಸುತ್ತಿದ್ದಾರೆ.

ನಿನ್ನೆ ರಾತ್ರಿ ಕುಂದಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಛೇರಿ ಎದುರು ಅಹೋರಾತ್ರಿ ಧರಣಿ ನಡೆಸಿದ ಪ್ರತಿಭಟನಕಾರರು ಅರಣ್ಯ ಸಂರಕ್ಷಣಾಧಿಕಾರಿ ಮತ್ತಿತರ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಕರ್ಜೆಯಲ್ಲಿ ಒಂದೇ ಮನೆಗೆ ಹೋಗುವ ರಸ್ತೆಗೆ ಎರಡು ಕೋಟಿ ಹಣಬಿಡುಗಡೆಯಾಗಿದ್ದು ಸಾಕಷ್ಟು ಅನುಮಾನಕ್ಕೆಕಾರಣವಾಗಿದೆ.ಮಾತ್ರವಲ್ಲ , ಮೀಸಲು ಅರಣ್ಯ ಕಡಿದು ಗುತ್ತಿಗೆದಾರ ಕಂ ಕ್ರಶರ್ ಮಾಲೀಕ ಪರಿಶಿಷ್ಟ ಪಂಗಡಕ್ಕೆ ಮೀಸಲಿಟ್ಟ ಹಣದಲ್ಲಿ ರಸ್ತೆ ನಿರ್ಮಿಸಿರುವುದನ್ನು ವಿರೋಧಿಸಿ ನಿನ್ನೆಯಿಂದ ಪ್ರತಿಭಟನೆ ನಡೆಯುತ್ತಿದೆ.

Edited By :
Kshetra Samachara

Kshetra Samachara

29/04/2022 12:11 pm

Cinque Terre

5.99 K

Cinque Terre

0

ಸಂಬಂಧಿತ ಸುದ್ದಿ