ಉಡುಪಿ: ಇತ್ತೀಚಿನ ದಿನಗಳಲ್ಲಿ ನಾಡಿನಾದ್ಯಂತ ಮತ ದ್ವೇಷದ ದಳ್ಳುರಿ ಹಬ್ಬಿಸುವ ಆತಂಕಕಾರಿ ವಿದ್ಯಾಮಾನಗಳು ಹೆಚ್ಚುತ್ತಿವೆ.ಈ ಹಿನ್ನೆಲೆಯಲ್ಲಿ ನಾಡಿನಲ್ಲಿ ಸೌಹಾರ್ದಯುತ ಸಹಬಾಳ್ವೆಯನ್ನು ಉಳಿಸಿ ಬೆಳೆಸುವ ಅಗತ್ಯವಿದ್ದು ಇದಕ್ಕಾಗಿ ಮೇ 7 ರಂದು ಉಡುಪಿಯಲ್ಲಿ ಬೃಹತ್ ಸಮಾವೇಶವೊಂದನ್ನು ಆಯೋಜಿಸಲಾಗುವುದು ಎಂದು ಉಡುಪಿ ಸಹಬಾಳ್ವೆ ಸಂಚಾಲಕ ಅಮೃತ್ ಶೆಣೈ ಹೇಳಿದ್ದಾರೆ.
ಪಬ್ಲಿಕ್ ನೆಕ್ಸ್ಟ್ ಜೊತೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಸೌಹಾರ್ದಯುತ ಸಹಬಾಳ್ವೆ ಬಯಸುವ ಪ್ರಗತಿಪರ ಸಂಘಟನೆಗಳ ಒಕ್ಕೂಟ, ಸಹಬಾಳ್ವೆ ಉಡುಪಿ ಇದರ ಸಹಯೋಗದಲ್ಲಿ ಮೇ 7ರಂದು ಉಡುಪಿಯಲ್ಲಿ ‘ಸೌಹಾರ್ದ ನಡಿಗೆ- ಸಹಬಾಳ್ವೆ ಸಮಾವೇಶ’ ಆಯೋಜಿಸಿದ್ದೇವೆ.ನಾಡಿನಲ್ಲಿ ಶಾಂತಿ ಸಾಮರಸ್ಯ ಬಯಸುವ ಸಾವಿರಾರು ಜನ ಅಂದು ಉಡುಪಿಗೆ ಆಗಮಿಸಲಿದ್ದಾರೆ.ಇಲ್ಲಿ ಪಾದಯಾತ್ರೆ ಮೂಲಕ ಸಾಗಿ ಬೃಹತ್ ಸಮಾವೇಶ ನಡೆಯಲಿದೆ.
ಸಮಾವೇಶದಲ್ಲಿ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ಪ್ರಗತಿಪರರು ಅತಿಥಿಗಳಾಗಿ, ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ. ಕರ್ನಾಟಕ ಸರ್ವಜನಾಂಗದ ಶಾಂತಿಯ ತೋಟವಾಗಿರಲಿ ಎಂಬ ಆಶಯದೊಂದಿಗೆ ಉಡುಪಿಯಲ್ಲಿ ಸೌಹಾರ್ದ ನಡಿಗೆ ಹಾಗೂ ಸಮಾವೇಶ ನಡೆಯಲಿದೆ ಎಂದವರು ಹೇಳಿದರು.
PublicNext
20/04/2022 02:57 pm