ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂಜತ್ತಬೈಲ್ : 5೦ ಲಕ್ಷ ರೂ.ವೆಚ್ಚದ  ಅಭಿವೃದ್ಧಿ ಕಾಮಗಾರಿಗೆ ಶಾಸಕರಿಂದ ಚಾಲನೆ

ಕುಂಜತ್ತಬೈಲ್ : ಮಂಗಳೂರು ನಗರ ಉತ್ತರ ಕ್ಷೇತ್ರದ ಮಹಾನಗರ ಪಾಲಿಕಾ ವ್ಯಾಪ್ತಿಯ ಕುಂಜತ್‌ಬೈಲು ಉತ್ತರ 13ನೇ ವಾರ್ಡಿನ ಜ್ಯೋತಿನಗರದಲ್ಲಿ ಅಭಿವೃದ್ಧಿ ಕಾಮಗಾರಿಗೆ 50ಲಕ್ಷ ರೂ ಅನುದಾನದಲ್ಲಿ ರಸ್ತೆ ಸಹಿತ ಅಭಿವೃದ್ಧಿ ಕಾರ್ಯಗಳಿಗೆ  ಶಾಸಕ  ಡಾ. ವೈ ಭರತ್ ಶೆಟ್ಟಿ  ಅವರು ಗುದ್ದಲಿ ಪೂಜೆ ನೆರವೇರಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು ಜ್ಯೋತಿನಗರ ಭಾಗದಲ್ಲಿ ಮೂಲ ಸೌಕರ್ಯ ಒದಗಿಸಲು ಹೆಚ್ಚಿನ ಆದ್ಯತೆ ನೀಡುವುದಾಗಿ ಭರವಸೆ ನೀಡಿದರು.

ಸ್ಥಳೀಯ ಮ.ನ.ಪಾ ಸದಸ್ಯ  ಶರತ್ ಕುಮಾರ್ ಅವರು ಅನುದಾನ ಒದಗಿಸಿದ ಶಾಸಕರಿಗೆ ಕೃತಜ್ಞತೆ ವ್ಯಕ್ತಪಡಿಸಿದರು.

ಜ್ಯೋತಿನಗರ ಶಕ್ತಿಕೇಂದ್ರ ಪ್ರಮುಖ್ ಗುರುರಾಜ್ ಪಾಟೀಲ್ ಗಣೇಶ್ ಕುಲಾಲ್, ಬೂತ್ ಅಧ್ಯಕ್ಷ ಮಂಜುನಾಥ್, ಕಾರ್ಯದರ್ಶಿ ಅಶ್ವಿನಿ ಶಿವರಾಜ್ ಜ್ಯೋತಿನಗರ, ಜಯಪಾಲ್, ಬಿಜೆಪಿ ಕಾರ್ಯಕರ್ತರು ಹಾಗೂ ಸ್ಥಳೀಯ ನಾಗರಿಕರು ಭಾಗವಹಿಸಿದ್ದರು.

Edited By : PublicNext Desk
Kshetra Samachara

Kshetra Samachara

09/03/2022 03:23 pm

Cinque Terre

1.52 K

Cinque Terre

0

ಸಂಬಂಧಿತ ಸುದ್ದಿ