ಮೂಡುಬಿದಿರೆ : ಕೃಷಿ ಮತ್ತು ನೀರಿನ ಅಭಿವೃದ್ಧಿಯ ಜತೆಗೆ ಕ್ಷೇತ್ರದಲ್ಲಿ ಒಟ್ಟು ರೂ 34.23 ಕೋಟಿ ವೆಚ್ಚದ ಅಣೆಕಟ್ಟುಗಳ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವ ಮೂಲಕ ಜನರ ನಿರೀಕ್ಷೆಯನ್ನು ಈಡೇರಿಸಲಾಗುತ್ತಿದೆ. ಅಭಿವೃದ್ಧಿಯ ವಿಷಯದಲ್ಲಿ ಜಾತಿ, ಧರ್ಮ ,ಪಕ್ಷ ಭೇದಗಳನ್ನು ಯಾವತ್ತೂ ಮಾಡುವುದಿಲ್ಲ . ಅಭಿವೃದ್ಧಿಗೆ ಅಡ್ಡಗಾಲು ಹಾಕುವ ಕೆಲಸವನ್ನು ಯಾರೂ ಮಾಡದೆ ಉಪಕಾರ ಸ್ಮರಣೆಯನ್ನು ರೂಢಿಸಿಕೊಳ್ಳಿ ಎಂದ ಅವರು ಮುಂದಿನ ತಿಂಗಳಿನಲ್ಲಿ ಮೂಲ್ಕಿ ಮಿನಿ ವಿಧಾನ ಸೌಧಕ್ಕೆ ಶಿಲಾನ್ಯಾಸ ನೆರವೇರಿಸಲಾಗುವುದೆಂದು ತಿಳಿಸಿದರು.
ಅವರು ಪಶ್ಚಿಮ ವಾಹಿನಿ ಯೋಜನೆಯಲ್ಲಿ ರೂ 10.67 ಕೋಟಿ ವೆಚ್ಚದಲ್ಲಿ ಮೂಡುಬಿದಿರೆ ಕ್ಷೇತ್ರದ ಸುಮಾರು 11 ಕಡೆಗಳಲ್ಲಿ ನಿರ್ಮಾಣಗೊಳ್ಳಲಿರುವ ಸೇತುವೆ ಸಹಿತ ಕಿಂಡಿ ಅಣೆಕಟ್ಟುಗಳಿಗೆ ಇಂದು ಶಿಲಾನ್ಯಾಸವನ್ನು ನೆರವೇರಿಸಿ ಮಾತನಾಡಿದರು.
ಕಾಮಗಾರಿಗಳ ವಿವರ : ಪಾಲಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಡಂದಲೆ ಪಲ್ಕೆ ಜಂಕ್ಷನ್ ನಿಂದ ಹೈಸ್ಕೂಲ್ ವರೆಗಿನ ತಿರುವುಗಳನ್ನು ಅಗಲಗೊಳಿಸುವ 1 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗೆ, ತೋಡಾರು ಗ್ರಾಮದ ಕೊಡಮಣಿತ್ತಾಯ ದೈವಸ್ಥಾನದ ಬಳಿ ರೂ. 75 ಲಕ್ಷ ವೆಚ್ಚದ ಸೇತುವೆ ಸಹಿತ ಕಿಂಡಿ ಅಣೆಕಟ್ಟು, 50ಲಕ್ಷ ವೆಚ್ಚದಲ್ಲಿ ಪಡ್ಡಲ ಎಂಬಲ್ಲಿ, ಇರುವೈಲು ಗ್ರಾಮದ ಕುತ್ಯಾಡಿ ಎಂಬಲ್ಲಿ ರೂ 50ಲಕ್ಷ ವೆಚ್ಚದ ಕಿಂಡಿ ಅಣೆಕಟ್ಟು, ಪುಚ್ಚಮೊಗರು ಗ್ರಾಮದ ಮೆಂಡೋನ್ಸಕೋಡಿ ಎಂಬಲ್ಲಿ 90ಲಕ್ಷ ವೆಚ್ಚದ ಕಿಂಡಿ ಅಣೆಕಟ್ಟು, ಮಾರೂರು ಗ್ರಾಮದ ಕಂಬಳದೋಡಿ ಎಂಬಲ್ಲಿ 90 ಲಕ್ಷ ರೂ ವೆಚ್ಚದಲ್ಲಿ, ಮೂಡುಕೊಣಾಜೆ ಗ್ರಾಮದ ಹೆಗ್ಗಡೆಕಟ್ಟ ಎಂಬಲ್ಲಿ 1ಕೋಟಿ ವೆಚ್ಚದಲ್ಲಿ, ಮೂಡುಕೊಣಾಜೆ ಗ್ರಾಮದ ಮಿತ್ತೊಟ್ಟು ಎಂಬಲ್ಲಿ ರೂ 2.61 ಕೋ.ವೆಚ್ಚದ, ಪಡುಕೊಣಾಜೆ ಗ್ರಾಮದ ಹೌದಾಲ್ ಎಂಬಲ್ಲಿ ಸೇತುವೆ ರೂ 1.6 ಕೋ. ವೆಚ್ಚದ, ಬೆಳುವಾಯಿ ಗ್ರಾಮದ ಕೆಸರುಗದ್ದೆ ಗಾಂಧಿನಗರ ಪಟ್ಲ ಎಂಬಲ್ಲಿ 60ಲಕ್ಷ ವೆಚ್ಚದಲ್ಲಿ ಹಾಗೂ ಪರಪ್ಪು ಎಂಬಲ್ಲಿ ರೂ 85ಲಕ್ಷ ವೆಚ್ಚದ ಸೇತುವೆ ಸಹಿತ ಕಿಂಡಿ ಅಣೆಕಟ್ಟು ನಿರ್ಮಾಣ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಲಾಯಿತು.
Kshetra Samachara
06/03/2022 09:27 pm