ಹೆಬ್ರಿ: ಹೆಬ್ರಿ ಹೊಸ ತಾಲೂಕಿನ ಎಲ್ಲ ಅವಶ್ಯಕತೆಗಳನ್ನು ಆದ್ಯತೆ ನೀಡಿ ಮಾಡಲಾಗುತ್ತಿದೆ. ಅತೀ ಶೀಘ್ರವಾಗಿ ಹೆಬ್ರಿ ತಾಲೂಕು ಪಂಚಾಯಿತ್ ಗೆ ನೂತನ ಕಟ್ಟಡ ನಿರ್ಮಾಣ ಮಾಡಲಾಗುವುದು ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್ ಹೇಳಿದರು.
ಅವರು ಹೆಬ್ರಿಯ ರಿಂಗ್ ರಸ್ತೆಯ ಬಳಿ 2.38 ಕೋಟಿ ರೂಪಾಯಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಹೆಬ್ರಿ ಪೊಲೀಸ್ ಠಾಣೆಯ ನೂತನ ಕಟ್ಟಡಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ರಾಷ್ಟ್ರೀಯ ಹೆದ್ದಾರಿ ಸಹಿತ ಹಲವು ಸಮಸ್ಯೆಯಿಂದಾಗಿ ಹೆಬ್ರಿ ಪೇಟೆಯ ನಡುವೆ ಮುಖ್ಯ ರಸ್ತೆಯಲ್ಲಿರುವ ಪೊಲೀಸ್ ಠಾಣೆಯನ್ನು ಸ್ಥಳಾಂತರಿಸುವ ಅನಿವಾರ್ಯತೆ ಇದ್ದು, ವಿಶಾಲ ಜಾಗದಲ್ಲಿ ಸಕಲ ವ್ಯವಸ್ಥೆಯೊಂದಿಗೆ ನೂತನ ಠಾಣೆಯು ಶೀಘ್ರದಲ್ಲೇ ನಿರ್ಮಾಣವಾಗಲಿದೆ ಎಂದರು.
Kshetra Samachara
12/02/2022 07:25 pm