ಕಾಪು: ಕಾಪು -ಪಡುಕೆರೆ - ಮಲ್ಪೆ ಲೋಕೋಪಯೋಗಿ ರಸ್ತೆಯ ಪುರಸಭಾ ವ್ಯಾಪ್ತಿಯ ಕೈಪುಂಜಾಲು ಪ್ರದೇಶದಿಂದ ಕೋತಲಕಟ್ಟೆಯಲ್ಲಿ ರಾ.ಹೆ. 66 ನ್ನು ಸಂಪರ್ಕಿಸುವ ರಸ್ತೆಯನ್ನು 50 ಲಕ್ಷ ರೂ. ವೆಚ್ಚದಲ್ಲಿ ಡಾಮರೀಕರಣದೊಂದಿಗೆ ಅಭಿವೃದ್ಧಿಗೊಳಿಸುವ ಕಾಮಗಾರಿಗೆ ಶಾಸಕ ಲಾಲಾಜಿ ಆರ್. ಮೆಂಡನ್ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಕಾಪು ಪುರಸಭಾ ವ್ಯಾಪ್ತಿಯಲ್ಲಿ ಹಾದು ಹೋಗುವ ಕಾಪು - ಪಡುಕೆರೆ - ಮಲ್ಪೆ ಪಿಡ್ಲೂ ಡಿ ರಸ್ತೆಯು ಮಳೆಹಾನಿಯಿಂದಾಗಿ ಸಂಪೂರ್ಣ ಹಾನಿಗಿಡಾಗಿದ್ದು ರಸ್ತೆ ಅಭಿವೃದ್ಧಿಗೆ ಸ್ಥಳೀಯರಿಂದ ನಿರಂತರವಾಗಿ ಬೇಡಿಕೆಗಳು ಬರುತ್ತಿದ್ದವು. ಇದೀಗ ಸುಮಾರು 50 ಲಕ್ಷ ರೂಪಾಯಿ ವೆಚ್ಚದಲ್ಲಿ ಮರು ಡಾಮರೀಕರಣದೊಂದಿಗೆ ಅಭಿವೃದ್ಧಿ ಪಡಿಸಲಾಗುತ್ತಿದ್ದು ಹೆದ್ದಾರಿ ಸಂಪರ್ಕಿಸುವವರೆಗೂ ಅಭಿವೃದ್ಧಿ ಪಡಿಸಲು ಯೋಜನೆ ರೂಪಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಕಾಪು ನಗರ ಯೋಜನಾ ಪ್ರಾದಿಕಾರದ ಅಧ್ಯಕ್ಷ ಸುಧಾಮ ಶೆಟ್ಟಿ ಮಲ್ಲಾರು, ಪುರಸಭೆ ಸದಸ್ಯರಾದ ಶೈಲೇಶ್ ಅಮೀನ್, ಸರಿತಾ ಪೂಜಾರಿ, ನಾಗೇಶ್ ಕೊಪ್ಪಲಂಗಡಿ, ಪಿಡಬ್ಲ್ಯೂಡಿ ಇಂಜಿನಿಯರ್ ಸವಿತಾ, ಪುರಸಭೆ ಇಂಜಿನಿಯರ್ ಪ್ರತಿಮಾ ಮೊದಲಾದವರು ಉಪಸ್ಥಿತರಿದ್ದರು.
Kshetra Samachara
08/02/2022 10:08 pm