ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಂದಾವರ: ಘನ ವಾಹನಗಳನ್ನು ತಡೆದು ಏರ್ ಪೋರ್ಟ್ ವಿರುದ್ದ ಪ್ರತಿಭಟನೆ

ಬಜಪೆ:ಸ್ಥಳಿಯಾಡಳಿತವು ಕಂದಾವರ ಗ್ರಾ.ಪಂ ಗೆ ನೀಡ ಬೇಕಾದ ತೆರಿಗೆ ಶುಲ್ಕವನ್ನು ಪಾವತಿಸದೇ ರಸ್ತೆ ನಿರ್ವಹಣೆ ,ದಾರಿದೀಪದ ವ್ಯವಸ್ಥೆ ಹಾಗೂ ಇತರ ಅಭಿವೃದ್ದಿ ಕಾರ್ಯಗಳಿಗೆ ಸಂಬಂಧಿಸಿದ ಬೇಡಿಕೆಗಳಿಗೆ ಯಾವುದೇ ರೀತಿಯಲ್ಲಿ ಸ್ಪಂದಿಸದೇ ಇರುವ ಏರ್ ಪೋರ್ಟ್ ಆಡಳಿತದ ನಿರ್ಲಕ್ಷ್ಯವನ್ನು ವಿರೋಧಿಸಿ ಕಂದಾವರ ಗ್ರಾ.ಪಂ ವ್ಯಾಪ್ತಿಯ ಗ್ರಾಮಸ್ಥರಿಂದ ಬಜಪೆ ಸಮೀಪದ ಮುರ ಜಂಕ್ಷನ್ ನ ದೇವರಾಜ ಅರಸು ವೃತ್ತದ ಬಳಿ ಪ್ರತಿಭಟನೆ ನಡೆಯಿತು.ಈ ವೇಳೆ ಏರ್ ಪೋರ್ಟ್ ಕಡೆಗೆ ತೆರಳುವಂತಹ ಘನ ವಾಹನಗಳನ್ನು ತಡೆಯಲಾಯಿತು.

ಪ್ರತಿಭಟನೆಯಲ್ಲಿ ಮಾತನಾಡಿದ ಕಂದಾವರ ಗ್ರಾ.ಪಂ ನ ಅಧ್ಯಕ್ಷ ಉಮೇಶ್ ಮೂಲ್ಯ ಅವರು ಏರ್ ಪೋರ್ಟ್ ನ ಕಾಮಗಾರಿಗಳಿಗಾಗಿ ಘನ ವಾಹನಗಳ ಸಂಚಾರದಿಂದಾಗಿ ರಸ್ತೆಯು ತೀರಾ ಹದಗೆಟ್ಟಿದೆ.ದುರಸ್ತಿ ಬಗ್ಗೆ ಗಮನ ಸೆಳೆದರೆ ಯಾವುದೇ ಸ್ಪಂದನೆ ಇಲ್ಲ.ಮುಂದಕ್ಕೆ ಯಾವುದೇ ಸ್ಪಂದನೆ ಸಿಗದೆ ಇದ್ದಲ್ಲಿ ಪ್ರತಿಭಟನೆಯನ್ನು ತೀವ್ರ ಗೊಳಿಸಲಾಗುವುದು ಎಂದು ಅವರು ಹೇಳಿದರು.

ಪ್ರತಿಭಟನೆಯಲ್ಲಿ ತಾ.ಪಂ ಸದಸ್ಯ ವಿಶ್ವನಾಥ ಶೆಟ್ಟಿ,ಗ್ರಾ.ಪಂ ನ ಸದಸ್ಯರುಗಳು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

Edited By : Shivu K
Kshetra Samachara

Kshetra Samachara

15/11/2021 09:58 am

Cinque Terre

14.92 K

Cinque Terre

0

ಸಂಬಂಧಿತ ಸುದ್ದಿ