ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಸುರತ್ಕಲ್ ಜಂಕ್ಷನ್ ಗೆ 'ವೀರ ಸಾವರ್ಕರ್' ಹೆಸರಿಡಲು ಪ್ರಸ್ತಾವನೆ: ಶಾಸಕರ ನಡೆಗೆ ಪರ- ವಿರೋಧ ವ್ಯಕ್ತ

ಮಂಗಳೂರು: ಮಂಗಳೂರು ನಗರ ಹೊರವಲಯದ ಸುರತ್ಕಲ್ ಜಂಕ್ಷನ್ ಗೆ ವೀರ ಸಾವರ್ಕರ್ ಹೆಸರಿಟ್ಟು, ಪುತ್ಥಳಿ ಸ್ಥಾಪಿಸಲು ಮುಂದಾದ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಭರತ್ ಶೆಟ್ಟಿ ಅವರ ನಡೆಗೆ ಭಿನ್ನ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಈಗಾಗಲೇ ಸುರತ್ಕಲ್ ಜಂಕ್ಷನ್ ಗೆ ವೀರ ಸಾರ್ವಕರ್ ಹೆಸರಿಡಲು ಶಾಸಕರು, ಮಂಗಳೂರು ಮಹಾನಗರ ಪಾಲಿಕೆಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಎಸ್ ಡಿಪಿಐ ‌ಈ‌ ನಡೆಯನ್ನು ತೀವ್ರವಾಗಿ ಖಂಡಿಸಿದ್ದು, ಸುರತ್ಕಲ್ ಗೆ ಹಲವು ವರ್ಷಗಳ ಇತಿಹಾಸವಿದೆ. ಸುರತ್ಕಲ್ ಜಂಕ್ಷನ್ ಗೆ ವಿವಾದಿತ ವ್ಯಕ್ತಿ ಸಾವರ್ಕರ್ ಹೆಸರಿಟ್ಟರೆ ಮಂಗಳೂರು ಮಹಾನಗರ ಪಾಲಿಕೆ, ಶಾಸಕರ ಕಚೇರಿ ಸೇರಿದಂತೆ

ಕರ್ನಾಟಕ ರಾಜ್ಯಾದ್ಯಂತ ಪ್ರತಿಭಟನೆಯ ಮೂಲಕ ಹೋರಾಟದ ಎಚ್ಚರಿಕೆಯನ್ನೂ ನೀಡಿದೆ.

ಇನ್ನು ಶಾಸಕರ ನಡೆಯನ್ನು ವಿಎಚ್ ಪಿ,‌‌ ಭಜರಂಗದಳ ಸ್ವಾಗತಿಸಿದ್ದು, ಶೀಘ್ರವಾಗಿ 'ವೀರ ಸಾವರ್ಕರ್' ಅವರ ಪುತ್ಥಳಿ ನಿರ್ಮಿಸುವಂತೆ ಒತ್ತಾಯಿಸಿದೆ. ಅತ್ತ ಕಾಂಗ್ರೆಸ್ ನ‌ ಮಾಜಿ ಶಾಸಕ ಮೊಯ್ದೀನ್ ಬಾವ ಕಿಡಿಕಾರಿದ್ದು, ಶಾಸಕ ಭರತ್ ಶೆಟ್ಟಿ ಅವರ

ನಡೆಯನ್ನು ಟೀಕಿಸಿದ್ದಾರೆ. ಸುರತ್ಕಲ್ ಕೋಮು ಸೂಕ್ಷ್ಮ ಪ್ರದೇಶ. ಇತ್ತೀಚಿನ ವರ್ಷಗಳಲ್ಲಿ ಹಲವು ಹತ್ಯೆಗಳಾಗಿದೆ. ಜನರ ಭಾವನೆಗಳನ್ನು ಕೆಡಿಸುವ ಕೆಲಸಕ್ಕೆ ಶಾಸಕರು ಮುಂದಾಗಬಾರದು. ಕೂಡಲೇ ಹೆಸರು ಬದಲಾಯಿಸುವ ಪ್ರಸ್ತಾವನೆಯನ್ನು

ಹಿಂಪಡೆಯಬೇಕು ಎಂದವರು ಆಗ್ರಹಿಸಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

05/11/2021 06:30 pm

Cinque Terre

14.15 K

Cinque Terre

7

ಸಂಬಂಧಿತ ಸುದ್ದಿ