ಉಡುಪಿ :ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ ಸುನಿಲ್ ಕುಮಾರ್ ಇಂದು 1912 ಸಹಾಯವಾಣಿ ಕಚೇರಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಹಾನವಮಿ ಹಬ್ಬದ ರಜಾ ದಿನದಂದು ಕೂಡ ಇಲಾಖಾ ದಕ್ಷತೆ ಪರಿಶೀಲಿಸಲು ಸಹಾಯವಾಣಿಗೆ ಭೇಟಿ ನೀಡಿ ಬರುವ ಕರೆಗಳ ವಿವರ ಪಡೆದರು.ಖುದ್ದು ಗ್ರಾಹಕರ ಕರೆಗಳನ್ನು ಸ್ವೀಕರಿಸಿ ದೂರುಗಳನ್ನು ಆಲಿಸಿ ಶೀಘ್ರ ಪರಿಹಾರ ಒದಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
Kshetra Samachara
14/10/2021 08:05 pm