ಗಂಗೊಳ್ಳಿ: ಬೈಂದೂರು ಮಂಡಲ ಹಿಂದುಳಿದ ವರ್ಗ ಮೋರ್ಚಾ ಗಂಗೊಳ್ಳಿ ಮೀನು ಮಾರುಕಟ್ಟೆಯಲ್ಲಿ ʼಸಾಮೂಹಿಕ ಮೀನು ಖರೀದಿʼ ಕಾರ್ಯಕ್ರಮ ಹಮ್ಮಿಕೊಂಡಿದೆ!.
"ಗೋ ಹತ್ಯೆ ವಿರೋಧಿಸಿ ಗಂಗೊಳ್ಳಿಯಲ್ಲಿ ಅ.1ರಂದು ನಡೆದ ಬೃಹತ್ ಪ್ರತಿಭಟನೆ ಜಾಥಾದಲ್ಲಿ ಭಾಗವಹಿಸಿದ ಮೀನುಗಾರ ಮಹಿಳೆಯರ ಆತ್ಮಸ್ಥೈರ್ಯ ಕುಗ್ಗಿಸಲು ಪ್ರತೀಕಾರವಾಗಿ ಅನ್ಯಕೋಮಿನ ಗುಂಪೊಂದು ಗಂಗೊಳ್ಳಿ ಮೀನು ಮಾರುಕಟ್ಟೆಯಲ್ಲಿ ತಮ್ಮ ಸಮುದಾಯದ ಜನರಿಗೆ ಮೀನು ಖರೀದಿಸಲು ತಡೆಯೊಡ್ಡಿದ್ದರಿಂದ ಕೆಲವು ದಿನಗಳಿಂದ ಗಂಗೊಳ್ಳಿ ಮೀನು ಮಾರುಕಟ್ಟೆಯಲ್ಲಿ ಗೊಂದಲ ಏರ್ಪಟ್ಟು, ಮೀನು ಮಾರಾಟ ಮಹಿಳೆಯರು ಕಂಗೆಟ್ಟಿದ್ದರು. ಈ ಆರ್ಥಿಕ ಬಹಿಷ್ಕಾರ ಪ್ರಯತ್ನವನ್ನು ಧಿಕ್ಕರಿಸುವ ನಿಟ್ಟಿನಲ್ಲಿ ಮಹಿಳಾ ಮೀನುಗಾರರಲ್ಲಿ ಧೈರ್ಯ ತುಂಬಲು ಹಾಗೂ ನಿಮ್ಮೊಂದಿಗೆ ನಾವಿದ್ದೇವೆ ಎಂಬ ಸಂದೇಶ ಸಾರುವ ಉದ್ದೇಶದಿಂದ ಬೈಂದೂರು ಮಂಡಲ ಹಿಂದುಳಿದ ವರ್ಗ ಮೋರ್ಚಾ ವತಿಯಿಂದ ಮೀನು ಖರೀದಿ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ" ಎಂದು ಬಿಜೆಪಿ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು ಹೇಳಿದರು.
"ಮೀನು ಖರೀದಿ ಮಾಡುವ ಈ ಕಾರ್ಯ ನಿರಂತರ ನಡೆಯಲಿದೆ. ಇದು ಯಾರ ವಿರುದ್ಧವೂ ಅಲ್ಲ, ಪ್ರತಿಭಟನೆಯೂ ಅಲ್ಲ" ಎಂದು ಬಿಜೆಪಿ ಮುಖಂಡರು ತಿಳಿಸಿದ್ದಾರೆ. ಬೈಂದೂರು ಹಿಂದುಳಿದ ಮೋರ್ಚಾ ಅಧ್ಯಕ್ಷ ಸಂತೋಷ್ ಪೂಜಾರಿ, ಪ್ರಧಾನ ಕಾರ್ಯದರ್ಶಿ ಗಣೇಶ್ ದೇವಾಡಿಗ, ಗಂಗೊಳ್ಳಿ ಗ್ರಾಪಂ ಉಪಾಧ್ಯಕ್ಷೆ ಪ್ರೇಮ ಸಿ.ಪೂಜಾರಿ. ಸದಸ್ಯೆ ಶಾಂತಿ ಖಾರ್ವಿ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
11/10/2021 08:11 pm