ಮಂಗಳೂರು: ಮಹಾನಗರ ಪಾಲಿಕೆಯ ನೀರಿನ ಶುಲ್ಕವನ್ನು ಸಾರ್ವಜನಿಕರು ಇನ್ನು ಮುಂದೆ ಆನ್ ಲೈನ್ ಮೂಲಕ ಪಾವತಿ ಮಾಡಬಹುದು.
ಈ ಬಗ್ಗೆ ವಿವರಣೆ ನೀಡಿದ ಮಂಗಳೂರು ಮನಪಾ ಉಪ ಆಯುಕ್ತ ಸಂತೋಷ್ ಕುಮಾರ್ ಅವರು, ಭಾರತೀಯ ಸ್ಟೇಟ್ ಬ್ಯಾಂಕ್ ನ ವಿವಿಧ ವಿಧಾನಗಳನ್ನು ಅನುಸರಿಸಿ ಮಂಗಳೂರು ಮನಪಾ ವೆಬ್ ಸೈಟ್ http://www.mangalurucity.mrc.gov.in ಗೆ ಲಾಗ್ ಇನ್ ಆಗಿ ಬಿಲ್ ಪಾವತಿ ಮಾಡಬಹುದು.
ಇಲ್ಲದಿದ್ದಲ್ಲಿ ಪಿಡಬ್ಲ್ಯೂಡಿ ನೌಕರರು ಮನೆ ಮನೆಗೆ ನೀರಿನ ಬಿಲ್ ಅನ್ನು ನೀಡಲು ಹೋಗುವ ಸ್ಥಳದಲ್ಲಿಯೇ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನಿಂಗ್ ಮಾಡಿಯೂ ಬಿಲ್ ಪಾವತಿ ಮಾಡಬಹುದು ಎಂದು ಹೇಳಿದರು.
ಅದೇ ರೀತಿ ಮಂಗಳೂರು ಮನಪಾ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಉದ್ದಿಮೆದಾರರಿಗೆ ವ್ಯಾಪಾರ ಪರವಾನಿಗೆಯನ್ನು ಆನ್ ಲೈನ್ ಮುಖಾಂತರ ನೀಡಲು ಸಾಫ್ಟ್ ವೇರ್ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಲಾಗಿದೆ.
ಈ ಸಾಫ್ಟ್ ವೇರ್ ವ್ಯವಸ್ಥೆಯು ಹೊಸ ವ್ಯಾಪಾರ ಪರವಾನಿಗೆಗೆ ಅರ್ಜಿ ಸಲ್ಲಿಸುವುದು, ವ್ಯಾಪಾರ ಪರವಾನಿಗೆಯನ್ನು ನವೀಕರಿಸುವುದು, ವ್ಯಾಪಾರ ಪರವಾನಿಗೆಯನ್ನು ರದ್ದುಪಡಿಸುವುದು, ದಾಖಲಾತಿಗಳನ್ನು ಹಾಗೂ ಉದ್ದಿಮೆಯ ಫೋಟೋ ಅಪ್ಲೋಡ್ ಮಾಡುವುದು, ಶುಲ್ಕವನ್ನು ಆನ್ ಲೈನ್ ಮುಖಾಂತರ ಪಾವತಿಸುವುದು, ವ್ಯಾಪಾರ ಪರವಾನಿಗೆ ಅನುಮೋದಿಸುವುದು, ವ್ಯಾಪಾರ ಪರವಾನಿಗೆಯನ್ನು ಮುದ್ರಿಸುವುದು ಮತ್ತು ವೆಬ್ ಪೋರ್ಟಲ್ ಮೂಲಕ ಪರವಾನಿಗೆಯ ಸ್ಥಿತಿಯನ್ನು ಪತ್ತೆ ಹಚ್ಚುವುದು, ಪ್ರತಿ ಉದ್ದಿಮೆಯನ್ನು ಗುರುತಿಸಲು ಜಿಯೋ ಟ್ಯಾಗಿಂಗ್ ವ್ಯವಸ್ಥೆ ಮುಂತಾದ ವೈಶಿಷ್ಟ್ಯಗಳನ್ನು ಈ ಸಾಫ್ಟ್ ವೇರ್ ನಲ್ಲಿ ಅಳವಡಿಸಲಾಗಿದೆ ಎಂದು ಹೇಳಿದರು.
Kshetra Samachara
01/01/2021 07:55 pm