ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಅಯೋಧ್ಯೆ ರಾಮನ ಗರ್ಭಗುಡಿಗೆ ಶಿಲಾನ್ಯಾಸ; ಪೇಜಾವರ ಶ್ರೀ ಭಾಗಿ

ಉಡುಪಿ: ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿ ಇವತ್ತು ಜ್ಯೇಷ್ಠ ಶುದ್ಧ ಬಿದಿಗೆಯ ಪರ್ವ ದಿನದಂದು ಶ್ರೀ ರಾಮನ ಗರ್ಭಗುಡಿಗೆ ಶಿಲಾನ್ಯಾಸ ನೆರವೇರಿತು. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಅಯೋಧ್ಯೆ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಸದಸ್ಯರಾದ ಪೇಜಾವರ ಶ್ರೀಗಳು ಬೃಹತ್ ಶಿಲೆಗಳಿಗೆ ವಿಧ್ಯುಕ್ತ ಪೂಜೆ ನೆರವೇರಿಸಿ ಶಿಲಾನ್ಯಾಸ ನೆರವೇರಿಸಿದರು.

ಕಳೆದ ಮೂರು ದಿನಗಳಿಂದ ಈ ಸ್ಥಳದಲ್ಲಿ ವೈದಿಕರಿಂದ ಚತುರ್ವೇದ ಮತ್ತು ರಾಮಾಯಣಗಳ ಸಾಮೂಹಿಕ ಪಾರಾಯಣ ಹಾಗೂ ಯಜ್ಞಗಳನ್ನು ನೆರವೇರಿಸಲಾಗಿದೆ. ಇದೇ ಸಂದರ್ಭ ಮಂದಿರ ನಿರ್ಮಾಣದ ಆಂದೋಲನ ಮತ್ತು ನ್ಯಾಯಾಲಯದ ತೀರ್ಪು ಮತ್ತು ಆ ಬಳಿಕ ಈ ಹಂತದವರೆಗಿನ ಎಲ್ಲ ಬೆಳವಣಿಗೆಗಳ ಸಚಿತ್ರ ವರದಿಯನ್ನೊಳಗೊಂಡ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು.

ಈ ಸಂಚಿಕೆಯಲ್ಲಿ ಪೇಜಾವರ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು ನಿರ್ವಹಿಸಿದ ಪಾತ್ರವನ್ನೂ ವಿಶೇಷವಾಗಿ ಉಲ್ಲೇಖಿಸಲಾಗಿದೆ. ಶಿಲಾನ್ಯಾಸ ಸಮಾರಂಭದಲ್ಲಿ ಪೇಜಾವರ ಶ್ರೀಗಳು, ವಿಷ್ಣು ಸಹಸ್ರನಾಮ ಪಾರಾಯಣಗೈದರು ಮತ್ತು ಉಡುಪಿ ಕೃಷ್ಣನ ಪ್ರಸಾದ, ಸಾಲಿಗ್ರಾಮ ಶಿಲೆಗಳು ಮತ್ತು ನವರತ್ನ, ಸುವರ್ಣ ನಾಣ್ಯಗಳನ್ನು ಭೂಮಿಗೆ ಅರ್ಪಿಸಿದರು. ಅಲ್ಲದೇ ಶ್ರೀಗಳು ಯೋಗಿ ಮತ್ತಿತರರನ್ನು ಸನ್ಮಾನಿಸಿದರು.

Edited By :
Kshetra Samachara

Kshetra Samachara

01/06/2022 06:28 pm

Cinque Terre

11.99 K

Cinque Terre

3

ಸಂಬಂಧಿತ ಸುದ್ದಿ