ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ತಾಲೂಕಿಗೆ 9,49,500ರೂ ಮಳೆ ಪರಿಹಾರ ಧನ ವಿತರಣೆ

ಮುಲ್ಕಿ:ಕಳೆದ ಒಂದು ವಾರದಿಂದ ನಿರಂತರ ಸುರಿದ ಮಳೆಯ ಕಾರಣ, ತಗ್ಗು ಪ್ರದೇಶ ಜಲಾವೃತಗೊಂಡಿದ್ದು ಹಲವು ಮನೆಗಳು ನೀರಿನಲ್ಲಿ ಮುಳುಗಿದ್ದು ಹಲವು ಮನೆ ಹಟ್ಟಿಗೆ ಹಾನಿಯಾಗಿದ್ದು ಎರಡು ದಿನಗಳಲ್ಲಿ ಪರಿಹಾರ ದೊರಕಿದ್ದು ಇದುವರೆಗೆ 9,49,500ರೂ ಮಳೆ ಪರಿಹಾರ ಧನ ವಿತರಣೆಯಾಗಿದೆ.

ಶಾಸಕ ಉಮಾನಾಥ ಕೋಟ್ಯಾನ್ ಅಧಿಕಾರಿಗಳ ಜೊತೆ ಹಾನಿಗೀಡಾದ ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ಮೊತ್ತ ಆದಷ್ಟು ಬೇಗ ಆರ್ಹ ವ್ಯಕ್ತಿಗಳಿ ನೀಡಬೇಕು ಎಂದು ಸೂಚನೆ ನೀಡಿದ್ದು ಕೇವಲ ಎರಡು ದಿನಗಳಲ್ಲಿ ಆರ್ಹ ವ್ಯಕ್ತಿಗಳ ಖಾತೆಗೆ ಪರಿಹಾರ ಮೊತ್ತ ವರ್ಗವಾಗಿದೆ.

ಮೂಲ್ಕಿ ತಾಲೂಕಿಗೆ ಇದುವರೆಗೆ 58 ಕುಟುಂಬಗಳಿಗೆ ಒಟ್ಟು 9,49, 500ರೂ ನೀಡಲಾಗಿದೆ. ಜಲಾವೃತವಾದ ಒಟ್ಟು 25 ಮನೆಗಳಿಗೆ ತಲಾ 10,000 ದಂತೆ 25,೦೦೦ ಪರಿಹಾರ ನೀಡಲಾಗಿದ್ದು, ಇದರಲ್ಲಿ ಕಿಲೆಂಜೂರು 15, ನಡುಗೋಡು 5, ಅತ್ತೂರು 4, ಬಪ್ಪನಾಡು 1 ಮನೆಗಳಿಗೆ ಪರಿಹಾರ ನೀಡಲಾಗಿದೆ.

ಮನೆ, ಹಟ್ಟಿಗಳಿಗೆ ಹಾನಿ, ಅಥವಾ ಇನ್ನಿತರ ಪ್ರಕರಣಗಳಲ್ಲಿ ತಾಲೂಕಿನ ಒಟ್ಟು 33 ಕುಟುಂಬಗಳಿಗೆ6,99500 ರೂ ಪರಿಹಾರ ನೀಡಲಾಗಿದೆ.

ಇದೀಗ ನೆರೆ ಇಳಿಮುಖವಾಗಿದ್ದು ಹಾನಿಗೊಳಗಾದ ಕೃಷಿ ಪ್ರದೇಶಗಳ ಸರ್ವೆ ನಡೆದು ನಂತರ ಕೃಷಿ ಹಾನಿ ಪರಿಹಾರ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

14/07/2022 08:50 am

Cinque Terre

5.55 K

Cinque Terre

0

ಸಂಬಂಧಿತ ಸುದ್ದಿ