ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಸಿಎಂ ಬರುವಾಗಲೇ ಹೆದ್ದಾರಿಯಲ್ಲಿ ಕೆಟ್ಟು ನಿಂತ ಲಾರಿ- ಪೊಲೀಸರಿಗೆ ಪೀಕಲಾಟ

ಮುಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿ ಬಸ್ ನಿಲ್ದಾಣದ ಕೆಳಬದಿಯ ಆರಾರ್ ಟವರ್ಸ್ ಎದುರುಗಡೆ ಪಣಂಬೂರ್‌ನಿಂದ ಕುಂದಾಪುರಕ್ಕೆ ರಸಗೊಬ್ಬರ ಹೇರಿಕೊಂಡು ಹೋಗುತ್ತಿದ್ದ ಲಾರಿ ಎಕ್ಸಿಲ್ ತುಂಡಾಗಿ ನಿಂತಿದ್ದು ಪೊಲೀಸರಿಗೆ ಪೀಕಲಾಟವಗಿ ಪರಿಣಮಿಸಿದ ಘಟನೆ ನಡೆದಿದೆ.

ಲಾರಿ ಕೆಟ್ಟು ನಿಂತಿದ್ದ ಹೆದ್ದಾರಿಯ ಮಾರ್ಗವಾಗಿಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಗಳೂರಿಂದ ಉಡುಪಿ ಕಡೆಗೆ ಪ್ರಯಾಣಿಸುತ್ತಿದ್ದರು. ಇದರಿಂದಾಗಿ ಸ್ಥಳಕ್ಕೆ ದೌಡಾಯಿಸಿದ ಮುಲ್ಕಿ ಇನ್ಸ್‌ಪೆಕ್ಟರ್ ಕುಸುಮಾಧರ್ ಅವರಿಗೆ ಮತ್ತಷ್ಟು ಟೆನ್ಷನ್ ಉಂಟಾಗಿ ಲಾರಿ ಚಾಲಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಬಳಿಕ ಎಷ್ಟೇ ಪ್ರಯತ್ನಪಟ್ಟರೂ ಲಾರಿ ಮುಂದಕ್ಕೆ ಸಂಚರಿಸಲು ಆಗದೆ ಕೊನೆಗೆ ಮೆಕ್ಯಾನಿಕ್‌ನನ್ನು ಕರೆದು ಪೊಲೀಸರು ಸ್ಥಳೀಯರ ನೆರವಿನೊಂದಿಗೆ ರಿಸ್ಕ್ ತೆಗೆದುಕೊಂಡು ಲಾರಿಯನ್ನು ದೂಡಿ ಹೆದ್ದಾರಿ ಬದಿಗೆ ಸರಿಸಿದರು. ಇದರಿಂದಾಗಿ ಸಿಎಂ ಬಂದೋಬಸ್ತ್‌ನಲ್ಲಿದ್ದ ಪೊಲೀಸರು ನಿಟ್ಟುಸಿರು ಬಿಡುವಂತಾಯಿತು. ಕೆಟ್ಟುಹೋದ ಲಾರಿ ತೆರವುಗೊಳಿಸಿದ ಕೆಲವೇ ಕ್ಷಣಗಳಲ್ಲಿ ಸಿಎಂ ಕೂಡ ಉಡುಪಿ ಕಡೆಗೆ ಬಿಗಿಬಂದೋಬಸ್ತ್ ನಲ್ಲಿ ನಿರಾತಂಕವಾಗಿ ತೆರಳಿದ್ದಾರೆ.

Edited By : Nagesh Gaonkar
PublicNext

PublicNext

31/05/2022 08:18 pm

Cinque Terre

41.84 K

Cinque Terre

5

ಸಂಬಂಧಿತ ಸುದ್ದಿ